ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಜನತೆ ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.
ಅಳ್ನಾವರ ತಾಲೂಕಿನ ಕಂಬಾರಗಣವಿ ಸೇತುವೆ ಮೇಲೆ ನೀರು ಹತ್ತಿದ್ದು, ಅರ್ಧ ಸೇತುವೆ ಈಗಾಗಲೇ ಮುಳುಗಡೆಯಾಗಿದೆ. ಕಳೆದ 15 ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಮುಖ್ಯವಾಗಿ ಅಳ್ನಾವರ ತಾಲೂಕಿನ ಜನ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ಕಂಬಾರಗಣವಿ ಗ್ರಾಮದಿಂದ ಅಳ್ನಾವರ, ಧಾರವಾಡ ಸೇರಿದಂತೆ ಇತರ ಮುಖ್ಯ ಊರುಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದೇ ಮಾರ್ಗದಲ್ಲಿ ಸೇತುವೆ ಇದ್ದು, ಮಳೆಯಿಂದ ಪ್ರವಾಹ ಬಂದರೆ ಈ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದ ಜನ ಸಂಚಾರವೇ ಸಂಪೂರ್ಣ ಬಂದ್ ಆಗಲಿದೆ.
ಈಗಾಗಲೇ ಈ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಮಳೆ ಹೀಗೇ ಮುಂದುವರೆದಿದ್ದೇ ಆದಲ್ಲಿ ಸೇತುವೆ ಪೂರ್ಣ ಪ್ರಮಾಣದಲ್ಲಿ ಮುಳುಗಡೆಯಾಗಲಿದೆ. ಸದ್ಯ ಅಲ್ಪ ಪ್ರಮಾಣದಲ್ಲಿ ನೀರು ಇದ್ದು, ಜನ ಇದರ ಮಧ್ಯೆಯೇ ಸಂಚಾರ ನಡೆಸಿದ್ದಾರೆ.
Kshetra Samachara
14/07/2022 07:54 pm