ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬೃಹತ್ ಗಾತ್ರದ ಹುಣಸೆ ಮರ ತೆರವು

ಅಣ್ಣಿಗೇರಿ: ಪಟ್ಟಣದ 3ನೇ ವಾರ್ಡಿನಲ್ಲಿ ಬರುವ ರೈಲ್ವೆ ನಿಲ್ದಾಣದ ಕಂಪೌಂಡ್ ಪಕ್ಕದಲ್ಲಿರುವ ಬೃಹತ್ ಗಾತ್ರದ ಮರವನ್ನು ಪುರಸಭೆಯ ವತಿಯಿಂದ ತೆರವುಗೊಳಿಸಲಾಯಿತು.ರಸ್ತೆಯ ಮಧ್ಯದಲ್ಲಿ ಮರ ಇದ್ದಿದ್ದರಿಂದ ಶಾಲಾ ವಾಹನಗಳು ಸೇರಿದಂತೆ ಸಾರ್ವಜನಿಕರು ವಾಹನಗಳಿಗೆ ಸಂಚರಿಸಲು ಪರದಾಡಬೇಕಾಗಿತ್ತು.

ಈ ಹಿಂದೆ ಪುರಸಭೆಯ ಮುಖ್ಯಾಧಿಕಾರಿಗಳಾದ ಕೆ..ಎಫ್. ಕಟಗಿ ಹಾಗೂ ಈಗಿನ ಮುಖ್ಯಾಧಿಕಾರಿ ಮಾಂತೇಶ್ ನಿಡುವಣಿ ಅವರಿಗೆ ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾದ ರಾಘವೇಂದ್ರ ರಾಮಗಿರಿ ಅವರು ಮನವಿ ಪತ್ರವನ್ನು ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಅಲ್ಲಿರುವ ಮರ ಮತ್ತು ಗಿಡಗಂಟೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇವರ ಈ ಕಾರ್ಯಕ್ಕೆ ವಾರ್ಡಿನ ಜನತೆ ಸೇರಿದಂತೆ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Edited By :
Kshetra Samachara

Kshetra Samachara

13/06/2022 07:54 am

Cinque Terre

64 K

Cinque Terre

0

ಸಂಬಂಧಿತ ಸುದ್ದಿ