ಧಾರವಾಡ: ರಾಜ್ಯದೆಲ್ಲೆಡೆ ಇದೀಗ ಮಳೆಯ ಅಬ್ಬರ ಜೋರಾಗಿದ್ದು, ಅನೇಕ ಕಡೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೋರುತಿದ್ದ ಬಸ್‍ನಲ್ಲೇ ಪ್ರಯಾಣಿಕರು ಕೊಡೆ ಹಿಡಿದು ಕುಳಿತ ಪ್ರಸಂಗ ನಡೆದಿದೆ.
ಧಾರವಾಡ ತಾಲೂಕಿನ ನಾಗಲಾವಿ ಗ್ರಾಮಕ್ಕೆ ಹೋಗುವ ಬಸ್‍ನ್ನು ಹತ್ತಿದ ಪ್ರಯಾಣಿಕರು, ಮಳೆ ನೀರಿಗೆ ಹೆದರಿದ್ದಾರೆ. ಏಕೆಂದರೆ ಬಸ್ ಸಂಪೂರ್ಣ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲರೂ ಛತ್ರಿ ಹಿಡಿದು ಕುಳಿತುಕೊಳ್ಳಬೇಕಾಯಿತು. ಬಸ್ ಸೀಟ್‍ಗಳು ಕೂಡ ನೀರಿನಿಂದ ತೊಯ್ದಿದ್ದರಿಂದ ಕೆಲ ಪ್ರಯಾಣಿಕರು ಚಾಲಕನ ಪಕ್ಕದ ಎಂಜಿನ್ ಮೇಲೆ ಕುಳಿತುಕೊಂಡು ಪ್ರಯಾಣಿಸಿದ್ದಾರೆ.
ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Kshetra Samachara
20/05/2022 11:12 pm