ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೆಸರು ಮಾತ್ರ ಪ್ರಗತಿ: ಇಲ್ಲಿ ಎಲ್ಲವೂ ಅಧೋಗತಿ

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಸ. ಹದಗೆಟ್ಟ ರಸ್ತೆಗಳು. ಮಳೆ ಬಂದರೆ ಸಾಕು ರಸ್ತೆಯ ತುಂಬೆಲ್ಲ ಕೆಸರು. ವಿದ್ಯುತ್ ಕಂಬಗಳಿವೆ ಆದ್ರೆ ರಾತ್ರಿವೇಳೆ ಬಲ್ಬ್ ಹತ್ತೋದೇ ಇಲ್ಲ. ಕುಡಿಯುವ ನೀರು ಮಾತ್ರ ಕೇಳಬೇಡಿ. ಯಾವಾಗ ಬರುತ್ತೋ ಯಾವಾಗ ಹೋಗುತ್ತೋ ಗೊತ್ತೇ ಆಗಲ್ಲ. ವಾರ್ಡ್ ನಂಬರ 48ರ ವಿದ್ಯಾನಗರದ ಪ್ರಗತಿ ಕಾಲೋನಿ 2 ನೇ ಕ್ರಾಸ್ ಜನರ ಗೋಳು ಹೇಳತೀರದಾಗಿದೆ.

ದೃಶ್ಯಗಳಲ್ಲಿ ನೀವು ನೋಡ್ತಿರಬಹುದು. ರಸ್ತೆ ಬದಿಯಲ್ಲಿ ಕಸವನ್ನು ಸುಮಾರು ಎರಡು ತಿಂಗಳಿನಿಂದ ಕಸ ವಿಲೇವಾರಿ ಮಾಡಿಲ್ಲ. ಈ ಕಾಲೋನಿಯ ನಿವಾಸಿಗಳು ಮನೆ ಒಳಗೆ ಹೋಗವ ತನಕವೂ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಾಲಿಕೆಗೆ ಕಂಪ್ಲೇಂಟ್ ಮಾಡಿದರೆ. ಯಾರೊಬ್ಬರೂ ಕೇರ್ ಮಾಡುತ್ತಿಲ್ಲ. ಅಲ್ಲೆ ಪಕ್ಕದಲ್ಲಿನ ರಸ್ತೆಗಳು ಪೂರ್ಣಗೊಂಡಿವೆ. ಅಲ್ಲಿ ಕಸದ ವಿಲೇವಾರಿ ಮಾಡುತ್ತಾರೆ ಆದ್ರೆ ಇಲ್ಲಿ ಮಾತ್ರ ಯಾಕೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಅನ್ನೋದು ತಿಳಿಯುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ನೇರವಾಗಿ ಆರೋಪಿಸುತ್ತಿದ್ದಾರೆ.

ಪಾಲಿಕೆಯವರು ನೀರಿನ ಬಿಲ್, ಮನೆ ಬಿಲ್ ತುಂಬಿಸಿಕೊಳ್ಳಲು ಮಾತ್ರ ಜಾಣರಾಗಿದ್ದಾರೆ ಹೊರತು ಸಮಸ್ಯೆಗಳ ಬಗ್ಗೆ ಕೇಳಲು ಹೋದ್ರೆ ನೀವು ಯಾರೋ ನಾವು ಯಾರೋ ಎನ್ನುವ ಲೆಕ್ಕಕ್ಕೆ ಬಂದುಬಿಟ್ಟಿದ್ದಾರೆ. ಈ ರಸ್ತೆಯಲ್ಲಿ ಸಂಜೆ ಮತ್ತು ಮುಂಜಾನೆ ಇಳಿವಯಸ್ಸಿನವರು, ಮಕ್ಕಳು ವಾಯುವಿಹಾರಕ್ಕೆ ಬರ್ತಾರೆ. ಆದರೆ ಈ ಕಸದ ಗಬ್ಬು ನಾತದಿಂದ ಇಲ್ಲಿನ ನಿವಾಸಿಗಳು ನರಕಯಾತನೆ ಅನುವಿಸುತ್ತಿದ್ದಾರೆ. ಕೂಡಲೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಆದಷ್ಟು ಬೇಗ ಇಲ್ಲಿನ ಸಮಸ್ಯೆಯನ್ನ ಬಗೆಹರಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

05/05/2022 05:29 pm

Cinque Terre

60.51 K

Cinque Terre

4

ಸಂಬಂಧಿತ ಸುದ್ದಿ