ಹುಬ್ಬಳ್ಳಿ: ಸ್ವಲ್ಪ ಮಳಿ ಬಂದ್ರೆ ಸಾಕ್ ಎಲ್ಲಾ ಕಚ್ಚಡಾ ಕಾಮಗಾರಿಗಳ ಬಣ್ಣ ಬಟ್ಟಾ ಬಯಲ್ ಆಗತೈತ್ತಿ ನೋಡ್ರೀ..
ಹೌದ್ರೀ... ಮಳೆ ಬಂದ್ ಮ್ಯಾಗ್ ನೀರ್ ಹರದ್ ಹೋಗಾಕ ಸರಿಯಾದ ಜಗಾಯಿಲ್ಲ. ಎಲ್ಲಾ ಚೇಂಬರ್ ತುಂಬಿ ಒಡದ್ ರಸ್ತೆಮ್ಯಾಗ್ ಮನ್ಯಾಗ್ ಅಂಗಡ್ಯಾಗ್ ನೀರ್ ನುಗ್ಗಿ ಮನಿಮಾಡಕೊಂತೈತ್ತಿ.
ಇದಕ್ ಸಾಕ್ಷಿ ಅನ್ನುವಂಗ್ ಇಲ್ಲಿ ನೋಡ್ರೀ.. ನಮ್ಮ ಕೇಶ್ವಾಪುರ್ ರಮೇಶ ಭವನದ ಹತ್ತರ್ ಇರುವ ಗುರುಶಾಂತ ಕಾಂಪ್ಲೆಕ್ಸ್ ನ್ಯಾಗಿನ ಅಂಗಡ್ಯಾಗ್ ಚೇಂಬರ್ ನೀರ್ ನುಗ್ಗಿ, ಅಲ್ಲಿ ಇರುವ ಫ್ರೀಜ್, ಟೇಬಲ್, ಕಪಾಟ್, ಚೇರ್ ಇನ್ನ ಉಳದ ಬಳದ ಸಾಮಾನ್ ಹೊಲಸ್ ಚೇಂಬರ್ ನೀರಾಗ್ ಬೋಟಿಂಗ್ ಮಾಡಾಕುಂತಾವ್.
ಈ ಹಿಂದಿನ ಇದ್ ರಸ್ತೆ ನ್ಯಾಗ್ ಚೇಂಬರ್ ಬಾಯಿ ಬಿಟ್ಟ ನಿಂತಿತ್ತ್ ಈಗ ಅದ್ ಚೇಂಬರ್ ಓವರ್ ಫ್ಲೋ ಆಗಿ. ಹಿಂತಾ ಅವಾಂತರ ಮಾಡೈತ್ರಿ. ತೆಲಿ ಕೆಟ್ಟ ಅಲ್ಲನ್ ಮಂದಿ ಮೋಟರ್ ಹಚ್ಚಿ ರಸ್ತೆ ನ್ಯಾಗ್ ನೀರ್ ಬೀಡಾಕುಂತ್ತಾರ್. ಸಂಭಂದಿಸಿದ ಪಾಲಿಕೆ ಅಧಿಕಾರಿಗಳೇ ದಯಮಾಡಿ ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕೋಡ್ರೀಪ್ಪಾ..
ಇದು ವೀಕ್ಷಕ ವರದಿ
ಪ್ರಿಯ ವೀಕ್ಷಕರೆ ನಿಮ್ಮ ನಗರದ ಸಮಸ್ಯೆಗಳ ವರದಿ ಮಾಡಲು what app ಮಾಡಿ 7349619443
Kshetra Samachara
29/03/2022 11:38 am