ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಣಕಲ್ ಹೆಸರು ಬದಲಾದರೂ ಕೆರೆಯೊಳಗಿನ ಕಸದ ರಾಶಿ ಕ್ಲೀನ್ ಆಗ್ಲೇ ಇಲ್ಲ

ಹುಬ್ಬಳ್ಳಿ: ಉಣಕಲ್ ಕೆರೆ ಹುಬ್ಬಳ್ಳಿ ನಗರದ ಒಂದು ಪ್ರಮುಖ ಸೆಳೆತವೇ ಆಗಿದೆ. ಸುತ್ತಲು ಸುಂದರ ಪರಿಸರ.ಚೆಂದದ ವಾತಾವರಣ ಹೀಗೆ ಎಲ್ಲವೂ ಇದೆ. ಇತಿಹಾಸ ಇರೋ ಈ ಕೆರೆಗೆ ಈಗ ಚನ್ನಬಸವ ಸಾಗರ ಅಂತಲೂ ನಾಮಕರಣ ಮಾಡಲಾಗಿದೆ. ಆದರೆ ಹೆಸರು ಬದಲಾದರೂ ಕೆರೆಯೊಳಗಿನ ಕಸದ ರಾಶಿ ಕ್ಲೀನ್ ಆಗಲೇ ಇಲ್ಲ.PublicNext ನಡೆಸಿದ ರಿಯಾಲಿಟಿ ಚೆಕ್ ಹೀಗಿದೆ ನೋಡಿ.

ಉಣಕಲ್ ಕೆರೆಗೆ ಅದರದ್ದೇ ಆದ ಇತಿಹಾಸ ಇದೆ. ಕೆರೆಯ ದಡಲ್ಲಿ ಉಳವಿ ಚನ್ನಬಸವೇಶ್ವರ ದೇವಸ್ಥಾನವೂ ಇದೆ. ಊರ ಜನರಿಗೆ ಈ ದೇವಸ್ಥಾನದಷ್ಟೇ ಕೆರೆಯನೂ ಪವಿತ್ರ ಸ್ಥಳ.ಅದಕ್ಕೇನೆ ಊರ ಜನ ಈ ಕೆರೆಗೆ ಚನ್ನಬಸವೇಶ್ವರ ಸಾಗರ ಅಂತಲೇ ನಾಮಕರ ಮಾಡಿಸಿದ್ದಾರೆ. ಹೆಸರೇನೋ ಬದಲಾಯಿತು.ಕೆರೆಯೊಳಗೆ ಎಸೆಯೋ ದೇವರ ಪೂಜೆಗೆ ಬಳಸಿದ, ವಸ್ತುಗಳ ಕಸ ಕೆರೆ ದಡದ ರೂಪವನ್ನೆ ಬದಲಿಸಿ ಬಿಟ್ಟಿದೆ.

ಚನ್ನಬಸವೇಶ್ವರ ದೇವಸ್ಥಾನದ ಸುತ್ತ-ಮುತ್ತಲೂ ನೀರೇನೋ ಇದೆ. ಅಲ್ಲಿ ನೀರಿಗಿಂತಲೂ ಜನ ಪೂಜೆಗೆ ಬಳಸಿರೋ ತೆಂಗಿನ ಕಾಯಿ-ಹೂವು-ಪ್ಲಾಸ್ಟಿಕ್ ಚೀಲ್ ಎಲ್ಲವೂ ಇಲ್ಲಿ ರಾಶಿ ರಾಶಿ ಬಿದ್ದಿದೆ. ಎಸೆಯೋರನ್ನ ಕಂಡ ಜನ ಇಲ್ಲಿ ಹಾಕಬೇಡಿ ಅಂತಲೂ ಹೇಳ್ತಾರೆ. ಅವರ ಮಾತನ್ನ ಇಲ್ಲಿ ಕೇಳೋರೇ ಇಲ್ಲ ಬಿಡಿ.

ಚನ್ನಬಸವ ಸಾಗರ ಅಂತ ಕೆರೆಯ ದಡದಲ್ಲಿ ಹೆಸರಿನ ಬೋರ್ಡ್ ಕೂಡ ಇದೆ. ಇದೇ ಬೋರ್ಡಿನ ಹಿಂದೆ ಸ್ಮಾರ್ಟ್ ಸಿಟಿ ವಾರ್ನಿಂಗ್ ಬೋರ್ಡ್ ಕೂಡ ಇದೆ. ಇದನ್ನ ಯಾರೂ ಗಮನಿಸೋದೇ ಇಲ್ಲ. ಎಚ್ಚರಿಕೆಯ ಬೋರ್ಡ್ ಪಕ್ಕದಲ್ಲಿಯೇ ರಾಶಿ ಕಸ ಇದೆ. ಯಾರು ಹೇಳಿದರೂ ಅಷ್ಟೆ. ಏನ್ ಬೋರ್ಡ್ ಹಾಕಿದರೂ ಅಷ್ಟೇ. ಏನೂ ಪ್ರಯೋಜ ಆಗಿಯೇ ಇಲ್ಲ. ಇಲ್ಲಿ ಇಬ್ಬರು ಗಾರ್ಡ್ ಗಳನ್ನ ಇಷ್ಟರೇ ಎಲ್ಲವೂ ಸರಿ ಹೋಗ್ತದೆ ಅನ್ನೋದು ಇಲ್ಲಿ ಸ್ಥಳೀಯರ ಸಲಹೆ. ಆದರೆ ಇವರ ಈ ಬೇಡಿಕೆ ಇನ್ನೂ ಹಾಗೇ ಇದೆ. ಇಲ್ಲಿ ಯಾವ ಗಾರ್ಡ್ ಇಲ್ಲ. ಏನಂದ್ರೆ ಏನೂ ಇಲ್ಲ.

ರೇವನ್ ಪಿ.ಜೇವೂರ್,

PublicNext,ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

10/11/2021 05:53 pm

Cinque Terre

41.53 K

Cinque Terre

2

ಸಂಬಂಧಿತ ಸುದ್ದಿ