ಕುಂದಗೋಳ: ಧಾರಾಕಾರ ಮಳೆಯ ಹೊಡೆತಕ್ಕೆ ದೇವನೂರು ಪಕ್ಕದ ಬೆಣ್ಣೆ ಹಳ್ಳ ಹಣುಮಂತನ ದೇವಸ್ಥಾನ ಸುತ್ತುವರಿದಿದ್ದು, ಇತ್ತ ದೇವನೂರಿಗೆ ಲಗ್ಗೆ ಇಡುವ ಆತಂಕ ಸೃಷ್ಟಿಸಿದೆ.
ಅಂದರಂತೆ ಹಂಚಿನಾಳ ಗ್ರಾಮದ ಪಕ್ಕದಲ್ಲೇ ಹರಿದು ಬೆಣ್ಣೆ ಹಳ್ಳ ಸೇರುವ ಅಜ್ಜನ ಹಳ್ಳದ ಪ್ರವಾಹ ಮಿತಿ ಮೀರಿದ್ದು, ಗ್ರಾಮದ ಸುತ್ತ ಮುತ್ತಲಿನ ಎಲ್ಲಾ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿವೆ. ಇನ್ನೇನು ಮಳೆ ಮುಂದುವರಿದಲ್ಲಿ ಹಂಚಿನಾಳ ಗ್ರಾಮಕ್ಕೆ ನೀರು ನುಗ್ಗುವ ಭಯ ಸ್ಥಳೀಯರಲ್ಲಿ ಹೆಚ್ಚಾಗಿದೆ.
ಇತ್ತ ದೇವನೂರು ಕ್ರಾಸ್ ಬಳಿ ಇರುವಂತಹ ಹಳ್ಳವೂ ಭರ್ತಿಯಾಗಿ ಹರಿಯುತ್ತಿದ್ದು ಜನ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಂಭವನೀಯತೆ ಹೆಚ್ಚಿದೆ.
ಸದ್ಯ ಗ್ರಾಮಸ್ಥರು ಹಳ್ಳದ ನೀರು ಗ್ರಾಮದ ಕಡೆ ಬರುವುದನ್ನು ಗಮನಿಸುತ್ತಿದ್ದು ತಮ್ಮ ಮನೆಗಳ ರಕ್ಷಣೆಗೆ ಸಿದ್ಧತೆ ನಡೆಸಿದ್ದಾರೆ.
Kshetra Samachara
20/05/2022 03:39 pm