ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವರುಣನ ಆರ್ಭಟಕ್ಕೆ ಬಿತ್ತು ಮನೆ ಗೋಡೆ, ಜಿನುಗುತ್ತಿದೆ ರಾಡಿ ನೀರು

ಕುಂದಗೋಳ : ಹಗಲೆಲ್ಲಾ ಬಿಸಿಲು ಮೋರೆ ತೋರಿ ಸಂಜೆ ದೋ ಎಂದು ಸುರಿಯುವ ವರಣನ ಅಟ್ಟಹಾಸಕ್ಕೆ ಸೃಷ್ಟಿಯಾಗುತ್ತಿರುವ ಅವಾಂತರಗಳು ಇಂದಿಗೂ ಕಡಿಮೆ ಆಗಿಲ್ಲಾ. ನಿನ್ನೆ ಸಾಯಂಕಾಲದ ಅವಧಿಯಲ್ಲಿ ದೋ ಸುರಿದ ಮಳೆಗೆ ಮತ್ತೊಂದು ಮನೆಯ ಗೋಡೆಯೊಂದು ಬಿದ್ದಿದ್ದರೆ ಇನ್ನೊಂದು ಮನೆಯಲ್ಲಿ ನೀರು ಜಿನುಗುತ್ತಿದೆ.

ಹೌದು ! ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಮಂಜುನಾಥ ಹಡಪದ ಹಾಗೂ ಗುರುಶಿದ್ದಪ್ಪ ನಾವಿ ಎಂಬುವವರ ಮನೆಯ ಮಧ್ಯಸ್ಥಿಕೆಯ ಗೋಡೆ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ, ಇನ್ನು ಇದೇ ಗ್ರಾಮದ ಸಂತೋಷ ನೆಲ್ಲೂರು ಎಂಬುವವರ ಮನೆಯಲ್ಲಿ ರಾಗಿ ನೀರು ಜಿನುಗುತ್ತಿದ್ದು ಸಂಪೂರ್ಣ ಮನೆಯಲ್ಲಿ ನೀರು ಸಂಗ್ರಹವಾಗಿದ್ದು ಕುಟುಂಬದವರು ಮೋಟಾರು ಮೂಲಕ ನೀರನ್ನು ಎತ್ತಿ ಹೊರ ಹಾಕುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/09/2020 03:21 pm

Cinque Terre

23.93 K

Cinque Terre

0

ಸಂಬಂಧಿತ ಸುದ್ದಿ