ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಪಂ ಕಟ್ಟಡ- ಶಾಲಾ ಗೋಡೆಗೆ ಜೇನುನೊಣ ಮುತ್ತಿಗೆಯಿಂದ ಮುಕ್ತಿ !

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಕುಂದಗೋಳ: ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿಯೊಂದು ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಶಾಲೆಯ ಗೋಡೆಗೆ ಮುತ್ತಿದ ಜೇನು ನೊಣಗಳ ಕಾಟಕ್ಕೆ ಮುಕ್ತಿ ನೀಡಿದೆ.

ಹೌದು... ಎರಡು ದಿನಗಳ ಹಿಂದಷ್ಟೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಮತ್ತು ಶಾಲೆಗೆ ದಿಗ್ಬಂಧನ ಹಾಕಿದಂತೆ ಮುತ್ತಿದ ತೊಗರು ಜೇನುನೊಣಗಳ ಬಗ್ಗೆ ವರದಿ ಬಿತ್ತರಿಸಿ ಸ್ವತಃ ಅಧಿಕಾರಿ ಹಾಗೂ ಜನಸಾಮಾನ್ಯರು ಕಚೇರಿ ಕಾಲಿಡಲು ತಮ್ಮ ಅಗತ್ಯ ಕೆಲಸ ಮಾಡಿಕೊಳ್ಳಲಾಗದ ಪರಿಸ್ಥಿತಿ ಬಗ್ಗೆ ಹಾಗೂ ಶಾಲಾ ಮಕ್ಕಳು ಭಯದಲ್ಲಿ ಓಡಾಟ ನಡೆಸುವ ಬಗ್ಗೆ ವರದಿ ಬಿತ್ತರಿಸಿತ್ತು‌.

ಈ ಬಗ್ಗೆ ಸ್ವತಃ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಅಸಹಾಯಕತೆ ತೋರಿ ದೂರ ಉಳಿದಿದ್ದರೂ, ಇದೀಗ ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿ ಗಮನಿಸಿದ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ವಿಷಯ ತಿಳಿದ ಈರಪ್ಪ ಇಂಚಲ ಅವರು ಸ್ವಇಚ್ಛೆಯಿಂದ ಶಾಲೆ ಹಾಗೂ ಪಂಚಾಯಿತಿ ಕಟ್ಟಡಕ್ಕೆ ಮುತ್ತಿದ ಜೇನು ನೊಣಗಳನ್ನು ಬಿಡಿಸಿ ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಬಿಟ್ಟಿದ್ದಾರೆ.

ಬುಧವಾರ ರಾತ್ರಿ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟ ಈರಪ್ಪ ಇಂಚಲ ಹಾಗೂ ಹಳ್ಳಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಯಾವುದೇ ಕೀಟನಾಶಕ ಬಳಸದೇ ಸಹಜವಾಗಿ ತೊಗರು ಜೇನುನೊಣಗಳನ್ನು ಬಿಡಿಸಿದ್ದಾರೆ.

ಸದ್ಯ, ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಗಡೇನಕಟ್ಟಿ ಗ್ರಾಮ ಪಂಚಾಯಿತಿ ಹಾಗೂ ಶಾಲೆಯ ಕಟ್ಟಡಕ್ಕೆ ದಿಗ್ಬಂಧನ ಹಾಕಿದ್ದ ಜೇನುನೊಣಗಳ ಕಾಟ ದೂರವಾಗಿ ಜನರ ಕೆಲಸಗಳು ಸಲೀಸಾಗಿವೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/09/2022 03:59 pm

Cinque Terre

104.27 K

Cinque Terre

3

ಸಂಬಂಧಿತ ಸುದ್ದಿ