ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡದೆ ಸುರಿದ ಮಳೆಗೆ ತತ್ತರಿಸಿದ ಹೆಸ್ಕಾಂ: 95 ಲಕ್ಷ ನಷ್ಟ ಅನುಭವಿಸಿದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ

ಹುಬ್ಬಳ್ಳಿ : ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ರೈತರು ಬೆಳೆದ ಬೆಳೆಗಳು ಹಾನಿಯಾಗಿರುವುದು ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಎಲ್ಲರ ಮನೆಗೆ ಬೆಳಕು ಚೆಲ್ಲುವ ವಿದ್ಯುತ್ ಸರಬರಾಜು ಕಂಪನಿ ಕೂಡ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಅಷ್ಟಕ್ಕೂ ಹಾನಿಯಾಗಿದ್ದಾದರೂ ಎಷ್ಟು ಅಂತೀರಾ ಈ ಸ್ಟೋರಿ ನೋಡಿ.

ಹೌದು..ಧಾರವಾಡ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲೂಕಿನಲ್ಲಿ ಸುರಿದ ಮಳೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ 94,96 ಲಕ್ಷ ರೂ. ನಷ್ಟ ಉಂಟಾಗಿದೆ. ಅತಿವೃಷ್ಟಿಯಿಂದ ಏಪ್ರಿಲ್ 1ರಿಂದ ಆಗಸ್ಟ್ 31ರವರೆಗೆ 1,549 ವಿದ್ಯುತ್ ಕಂಬ, 33 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾಳಾಗಿವೆ. ಸತತ ಮಳೆ ಸುರಿದರೂ ಯಾವುದೇ ಗ್ರಾಮ ಕತ್ತಲೆಯಲ್ಲಿ ಮುಳುಗಿಲ್ಲ ಎಂಬುದು ಸಮಾಧಾನದ ಸಂಗತಿ.

ನವಲಗುಂದ, ಅಣ್ಣಿಗೇರಿ ಭಾಗದಲ್ಲಿ ಸತತ ಮಳೆ ಸುರಿದರೂ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳಿಗೆ ಧಕ್ಕೆಯಾಗಿದೆ. ಧಾರವಾಡ, ಹುಬ್ಬಳ್ಳಿ, ಶಹರ, ಕಲಘಟಗಿ, ಕುಂದಗೋಳ ಭಾಗದಲ್ಲಿ ವಿದ್ಯುತ್ ಕಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲಕ್ಕೊರಗಿವೆ.

ಧಾರವಾಡ ಮತ್ತು ಹುಬ್ಬಳ್ಳಿ ಶಹರದಲ್ಲಿ ಮಾತ್ರ ವಿದ್ಯುತ್ ಪರಿವರ್ತಕಕ್ಕೆ ಧಕ್ಕೆಯಾಗಿದೆ.ಬೆಣ್ಣಿಹಳ್ಳ, ತುಪ್ಪರಿಹಳ್ಳದ ಕೇಂದ್ರ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿ ವಿವಿಧ ಗ್ರಾಮಗಳು ಬಹಳಷ್ಟು ಸಮಸ್ಯೆ ಎದುರಿಸಿವೆ. ಈ ವೇಳೆ ಕೆಲ ಕಾಲ ವಿದ್ಯುತ್ ಸಂಪರ್ಕ, ಕಡಿತಗೊಳಿಸಲಾಗಿತ್ತು ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

Edited By : Somashekar
Kshetra Samachara

Kshetra Samachara

15/09/2022 12:17 pm

Cinque Terre

88.5 K

Cinque Terre

6

ಸಂಬಂಧಿತ ಸುದ್ದಿ