ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೀಲಮ್ಮನ ಕೆರೆಯ ಉದ್ಯಾನವನಕ್ಕೆ ಈಗ ದುರಸ್ತಿ ಭಾಗ್ಯ

ನವಲಗುಂದ : ವರ್ಷಗಳಿಂದ ಅವ್ಯವಸ್ಥೆಯ ಆಗಾರವಾದ ನವಲಗುಂದ ನೀಲಮ್ಮನ ಕೆರೆಗೆ ಈಗ ದುರಸ್ತಿಯ ಭಾಗ್ಯ ಒಲಿದು ಬಂದಿದ್ದು, ಪುರಸಭೆಯ ಅಧಿಕಾರಿಗಳು ಈಗ ನೀಲಮ್ಮ ಕೆರೆಯ ಉದ್ಯಾನವನವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಹೌದು ದಶಕಗಳ ಇತಿಹಾಸವಿರುವ ನೀಲಮ್ಮ ಕೆರೆಗೆ ಈಗ ದುರಸ್ತಿಯ ಸೌಭಾಗ್ಯ ಬಂದಿದ್ದು, ಈಗಾಗಲೇ ಪುರಸಭೆಯ ಅಧಿಕಾರಿಗಳು ಕೆರೆಯ ಒಂಡೆಯಲ್ಲಿರುವ ಗಾರ್ಡನ್ ಸಂಪೂರ್ಣ ಹಾಳಾಗಿದ್ದನ್ನು ಮತ್ತೆ ವ್ಯವಸ್ಥಿತವಾಗಿ ಮಾಡಲು ಮುಂದಾಗಿದ್ದಾರೆ. ಕೆರೆಯ ಸುತ್ತಲೂ ಬೆಳೆದ ಜಾಲಿ ಗಿಡ, ಕಳ್ಳಿ ಗಿಡ ಸೇರಿದಂತೆ ಕಂಟಿಗಳನ್ನು ತೆಗೆದುಹಾಕಲು ಶುರುವಿಟ್ಟು ಕೊಂಡಿದ್ದಾರೆ. ಇನ್ನೂ ಕೆರೆಯ ಕಟ್ಟೆ ಸಹ ಒಡೆದು ಹೋಗಿದ್ದು, ಟೆಂಡರ್ ಸಹ ಕರೆಯಲಾಗಿದೆ ಅಂತೇ ಇನ್ನೂ ಕೆಲವು ದಿನಗಳಲ್ಲಿ ಕಾಮಗಾರಿ ಸಹ ಆರಂಭವಾಗುವುದಂತೆ.

Edited By : Manjunath H D
Kshetra Samachara

Kshetra Samachara

01/12/2020 05:10 pm

Cinque Terre

47 K

Cinque Terre

0

ಸಂಬಂಧಿತ ಸುದ್ದಿ