ಕಲಘಟಗಿ:ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಅನಸೂಯಾ ಹೆಬ್ಬಳ್ಳಿಮಠ ಹಾಗೂ ಪ ಪಂ ಸದಸ್ಯರು,ಅಧಿಕಾರಿಗಳು ತುಮರಿಕೊಪ್ಪ ಬೆಣಚಿಕೆರೆಗೆ ಹಾಗೂ ನೀರು ಶುದ್ಧಿಕರಣ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದರು.
ಪಟ್ಟಣಕ್ಕೆ ನೀರು ಪೂರೈಸುವ ನೀರು ಶುದ್ಧಿಕರಣ ಘಟಕ ಹಾಳಾಗಿದ್ದು,ಶೀಘ್ರ ಶುದ್ಧಿಕರಣ ಘಟಕದ ಫಿಲ್ಟರ್ ಬೆಡ್ ದುರಸ್ಥಿ ಮಾಡಿಸುವಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಅಧ್ಯಕ್ಷರಾದ ಅನಸೂಯಾ ಹೆಬ್ಬಳ್ಳಿಮಠ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಚಂದ್ರಶೇಖರ,ಇಂಜಿನಿಯರ್ ವಿರೇಶ ಸವಡಿ,ಪ ಪಂ ಸದಸ್ಯರಾದ ಸುನೀಲ ಗಬ್ಬೂರ,ಗಂಗಪ್ಪ ಗೌಳಿ,ಕಲ್ಮೇಶ ಬೆಣ್ಣಿ,ಬಸವರಾಜ ಕಡ್ಲಾಸ್ಕಾರ,ನಿಂಗಪ್ಪ ಹರಪ್ಪನಳ್ಳಿ,ಬಸಯ್ಯ ಹೆಬ್ಬಳ್ಳಿಮಠ,ಮಂಜುಳಾ ನಾಯಕ ಹಾಗೂ ಪ ಪಂ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
15/11/2020 02:56 pm