ನವಲಗುಂದ : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಹೆಚ್.ಆರ್.ಪಾಲಿಸಿ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ಕೈಗೊಂಡು ಘೋಷಣೆ ಕೂಗಿ ನಾಮ ಫಲಕ ಪ್ರದರ್ಶಿಸಿದರು.
ಬಳಿಕ ಮಾತನಾಡಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಸರ್ಕಾರದಿಂದ ನೇಮಕವಾದ ವೈದ್ಯಕೀಯ ಸಿಬ್ಬಂದಿಗಳಂತೆ ಅನುಭವ ಪದವಿ ಎರೆಡು ಪಡೆದರೂ ನಮಗೆ ಖಾಯಂ ನೇಮಕಾತಿ ಕಲ್ಪಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
Kshetra Samachara
05/10/2020 01:56 pm