ಕುಂದಗೋಳ: ಅಲ್ಲಾ-ಅಲ್ಲಮ ಒಂದೇ ಎಂದ ಹಿಂದೂ-ಮುಸ್ಲಿಂ ಸಿಹಿ ಸಿರಕುಂಬಾ !
ಕುಂದಗೋಳ: ಹಿಂದೂ ಮುಸ್ಲಿಂ ಭಕ್ತಿ ಭಾವೈಕ್ಯತೆಗೆ ಕುಂದಗೋಳ ಪಟ್ಟಣದ ದ್ಯಾಮವ್ವದೇವಿ ಮೂರ್ತಿ ಪ್ರತಿಷ್ಠಾಪನೆ ಜಾತ್ರಾ ಮಹೋತ್ಸವ ಸಾಕ್ಷಿಯಾಗಿದೆ.
ಹೌದು ! ದ್ಯಾಮವ್ವದೇವಿ ಮೂರ್ತಿ ಪ್ರತಿಷ್ಠಾಪನೆ ಜಾತ್ರಾ ಅಂಗವಾಗಿ ಕುಂದಗೋಳದ ಬೀದಿಗಳಲ್ಲಿ ತಾಯಿ ದ್ಯಾಮವ್ವದೇವಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಈ ಮೆರವಣಿಗೆಯುದ್ದಕ್ಕೂ ಮಹಿಳೆಯರಿಗೆ ಭಂಡಾರದ ಹಬ್ಬ ಆಡಲು ಅವಕಾಶ ಒದಗಿ ಆರ್ಕೆಸ್ಟ್ರಾ ಹಾಡಿಗೆ ಹೆಂಗೆಳೇಯರು ಕುಣಿದು ಕುಪ್ಪಳಿಸಿದರು. ಈ ವೇಳೆ ಮುಸ್ಲಿಂ ಹೂವಿನ ಅಂಗಡಿ ವ್ಯಾಪಾರಸ್ಥರು ತಾಯಿ ದ್ಯಾಮವ್ವದೇವಿ ಪಲ್ಲಕ್ಕಿ ಹಾಗೂ ವಾದ್ಯ ಮೇಳಗಳಿಗೆ ಹೂ ಮಳೆ ಸುರಿದರು.
ಡೊಳ್ಳು ವಾದ್ಯಮೇಳಗಳ ನಡುವೆ ನಡೆದ ದ್ಯಾಮವ್ವದೇವಿ ಪಲ್ಲಕ್ಕಿ ಉತ್ಸವ ಮರಳಿ ದೇವಸ್ಥಾನದ ತಲುಪುತ್ತಿದ್ದಂತೆ ಮುಸ್ಲಿಂ ಬಾಂಧವರು ಸಿರಕುಂಬಾ ತಯಾರಿಸಿ ಸರ್ವ ಭಕ್ತಾಧಿಗಳಿಗೆ ವಿತರಿಸಿದರು. ಇತ್ತ ದೇವಸ್ಥಾನದ ಕಮಿಟಿ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸಹ ನೆರವೇರಿಸಲಾಗಿತ್ತು.
Kshetra Samachara
12/05/2022 06:42 pm