ಹುಬ್ಬಳ್ಳಿ: ನಗರದ ಗಿರಣಿಚಾಳದಲ್ಲಿನ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡಿದ ತದನಂತರದಲ್ಲಿ ಪಾಲಿಕೆ ಅಧಿಕಾರಿಗಳು ಮತ್ತೇ ಬಾವಿಯತ್ತ ತಿರುಗಿ ನೋಡಿರಲಿಲ್ಲ, ಈ ಹಿನ್ನೆಲೆ ಕೆರೆಯಲ್ಲಿ ತ್ಯಾಜ್ಯ ಸಂಗ್ರಹಣೆ ಆಗಿ ದುರ್ನಾತ ಬೀರುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಸ್ಪಂದಿಸದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಬಾವಿಯಲ್ಲಿನ ತ್ಯಾಜ್ಯವನ್ನು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಬಾವಿ ಇರುವ ಕೂಗಳತೆಯ ಅಂತರದಲ್ಲಿ ವಲಯ ಕಚೇರಿ ಇದ್ದರು ಕೂಡಾ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಕೂಡಾ ಹರಿಸದೆ ಇರೋದು ಕೂಡಾ ಅಧಿಕಾರಿಗಳ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಜತ ಉಳ್ಳಾಗಡ್ಡಿಮಠ ಖುದ್ದು ಜೆಸಿಬಿ, ಹಾಗೂ ಕ್ರೇನ್ ಸಹಾಯದಿಂದ ಕೆರೆಯಲ್ಲಿನ ತ್ಯಾಜ್ಯ ಹಾಗೂ ವಿಸರ್ಜನೆ ಮಾಡಿದ ಗಣೇಶನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.
Kshetra Samachara
03/10/2022 12:15 pm