ಕುಂದಗೋಳ: ನಿತ್ಯ ಸಾರಿಗೆ ಬಸ್ ಏರಲು ನೂಕುನುಗ್ಗಲು, ಹಗಲಲ್ಲೇ ಬಸ್ ನಿಲ್ದಾಣದಲ್ಲಿ ಕಳ್ಳರ ಕೈ ಚಳಕ, ಸಾರಿಗೆ ಚಾಲಕ ನಿರ್ವಾಹಕರ ಜೊತೆ ವಿದ್ಯಾರ್ಥಿಗಳ ವಾಗ್ವಾದ. ಹೌದು. ಇಂತಹ ಅಹಿತಕರ ಘಟನೆಗೆ ಪಬ್ಲಿಕ್ ನೆಕ್ಸ್ಟ್ ವರದಿ ಆರಕ್ಷಕರ ಭದ್ರತೆ ನೀಡಿದೆ.
ಹೌದು ! ಕುಂದಗೋಳ ಸಾರಿಗೆ ಬಸ್ ನಿಲ್ದಾಣದಲ್ಲಿ ನಿತ್ಯ ಹೆಚ್ಚಾದ ಕಳ್ಳರ ಹಾವಳಿ ಹಾಗೂ ವಿದ್ಯಾರ್ಥಿ ಚಾಲಕ ನಿರ್ವಾಹಕರ ವಾಗ್ವಾದದ ಸಮಸ್ಯೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿ ವರದಿ ಬಿತ್ತರಿಸಿ, ಬಸ್ ನಿಲ್ದಾಣಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ವರದಿ ಬಿತ್ತರಿಸಿತ್ತು.
ಈ ವರದಿ ಗಮನಿಸಿದ ಕುಂದಗೋಳ ಗ್ರಾಮೀಣ ಪೊಲೀಸರು ಕುಂದಗೋಳ ಬಸ್ ನಿಲ್ದಾಣಕ್ಕೆ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಬಸ್ ಏರುವಾಗ, ಇಳಿಯುವಾಗ ಉಂಟಾಗುತ್ತಿದ್ದ ಗದ್ದಲ ನಿರ್ವಹಣೆ, ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದ ಬೈಕ್ ಸವಾರರು ಹಾಗೂ ಆಟೋ ನಿಲ್ದಾಣದ ವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
Kshetra Samachara
04/07/2022 09:48 pm