ಕುಂದಗೋಳ : ಧೂಳು ತುಂಬಿದ ಜಾಗ, ಸಾರ್ವಜನಿಕರಿಗೆ ಕೂರಲು ಕುರ್ಚಿ ಇಲ್ಲದೆ ಇಂದು ಅಥವಾ ನಾಳೆ ಬೀಳುವ ಹಂತದಲ್ಲಿರುವ ಕಟ್ಟಡ. ಪುಸ್ತಕಗಳೇ ಇರದಂತಹ ಗ್ರಂಥಾಲಯ ಕಂಡು ಬಂದಿದ್ದು ಕುಂದಗೋಳ ತಾಲೂಕಿನ ದೊಡ್ಡ ಗ್ರಾಮ ಯರಗುಪ್ಪಿಯಲ್ಲಿ.
ಹೌದು ! ಎಲ್ಲೇಂದರಲ್ಲಿ ಒಣ ಕಸ ತ್ಯಾಜ್ಯ ವಸ್ತುಗಳು, ಸಿಮೆಂಟ್ ಚೀಲ, ಪ್ಲಾಸ್ಟಿಕ್ ಹಾಳೆ. ಕಟ್ಟಡದ ಬಲ ಮತ್ತು ಎಡೆ ಭಾಗದಲ್ಲಿ ಕಸದ ಮೂಟೆ ಬಿದ್ದು ಗಬ್ಬೆದ್ದು ನಾರುತ್ತಿರುವ ಹಳೇ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಪೋಸ್ಟ್ ಆಫೀಸ್ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ನಿತ್ಯ ಮೂರು ಕಚೇರಿಗೆ ಬರುವ ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆ ನೋಡಿ ರೋಸಿ ಹೋಗಿದ್ದಾರೆ. ಸಾಲದಕ್ಕೆ ಮಳೆಗಾಲದಲ್ಲಿ ಕಚೇರಿ ಮೇಲ್ಮಾಳಿಗೆ ಸೋರುತ್ತದೆ.
ಆದ್ರೆ ಹಳೆಯದಾದ ಒಂದೇ ಕಟ್ಟಡದಲ್ಲಿ ಗ್ರಂಥಾಲಯ, ಪೋಸ್ಟ್ ಆಫೀಸ್, ಗ್ರಾಮ ಲೆಕ್ಕಾಧಿಕಾರಿಗಳ ಆಫೀಸ್ ಗೆ ಸ್ಥಳ ಮೀಸಲಿಟ್ಟಿದ್ದು ಸ್ವತಃ ಸಿಬ್ಬಂದಿಗಳೇ ಕೈಯಲ್ಲಿ ಜೀವ ಹಿಡಿದು ಕೆಲಸ ಮಾಡುವಂತಾಗಿದೆ. ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನರ್ತಿ, ಮುಳ್ಳಹಳ್ಳಿ ಸೇರಿ 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿಯ ಅವ್ಯವಸ್ಥೆ ತಹಶೀಲ್ದಾರ ಕಣ್ಣಿಗೆ ಬಿದ್ದಿಲ್ವಾ ಎಂಬುದು ಜನರ ಪ್ರಶ್ನೇಯಾಗಿದೆ.
Kshetra Samachara
24/05/2022 05:03 pm