ಹುಬ್ಬಳ್ಳಿ: 80 ವರ್ಷದ ವೃದ್ಧನೊಬ್ಬ ಮನೆಗೆ ಹೋಗಲು ವಾಹನವಿಲ್ಲದೆ ಪರದಾಡುತ್ತಿದ್ದಾಗ, ವೃದ್ಧನನ್ನು ಗಮನಿಸಿದ ಎಸಿಪಿ ವಿನೋದ ಮುಕ್ತೆದಾರ ಅವರು ತಮ್ಮ ಸ್ವಂತ ಜೀಪ್ ನಲ್ಲೆ ಮನೆಗೆ ಕಳಿಸುವುದರ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿರೊ ವೀಡಿಯೋ ಈಗ ಫುಲ್ ವೈರಲ್ ಆಗುತ್ತಿದೆ.
ಹೌದು,,, ನಗರದ ಗೋಕುಲ್ ರಸ್ತೆಯಲ್ಲಿ ಪೊಲೀಸ್ ಧ್ವಜ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ನಿವೃತ್ತಿ ಹೊಂದಿದ್ದ 80 ವರ್ಷದ ವೃದ್ಧರೊಬ್ಬರು ಬಂದಿದ್ದರು. ಮರಳಿ ಮನೆಗೆ ಹೋಗಲು ವಾಹನ ಹುಡುಕುತ್ತಿರುವಾಗ.ವೃದ್ಧನನ್ನು ನೋಡಿದ ಎಸಿಪಿ ವಿನೋದ ಮುಕ್ತೆದಾರ ಅವರು ತಮ್ಮ ಜೀಪ್ ದಲ್ಲೆ ವೃದ್ಧನನ್ನು ತಾವೇ ಕರೆದುಕೊಂಡು ಬಂದು ಕೂರಿಸಿ ಮನೆಗೆ ಬಿಟ್ಟು ಬರಲು ಚಾಲಕನಿಗೆ ಹೇಳಿ ಮಾನವೀಯತೆಗೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಎಸಿಪಿ ಮುಕ್ತೆದಾರ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
07/04/2022 09:38 pm