ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:NWKRTC ಎಡವಟ್ಟು: ಟೈರ್ ಚೇಂಜ್ ಮಾಡ್ತಿರೋ ಇಲ್ಲೋ ಗುಜರಿಗೆ ಹಾಕ್ತಿರೋ.!

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಬಹು ಜನಪ್ರಿಯ ಸಂಸ್ಥೆಯಾಗಿರುವ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ ಹಲವು ದಿನಗಳಿಂದ ಲಾಸ್‌ನಲ್ಲಿಯೇ ಇದೆ. ಜನರಿಗೆ ನಿತ್ಯ ಸೇವೆಯನ್ನು ನೀಡುತ್ತಿರುವ ಸಂಸ್ಥೆ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಲಾಸ್‌ನಲ್ಲಿರುವಾಗಲೇ ಬಸ್‌ಗಳ ಟೈರ್‌ಗಳನ್ನು ಬಿಚ್ಚಿಟ್ಟು ಹಲವು ಅನುಮಾನ ಹುಟ್ಟುವಂತೆ ಮಾಡಿದೆ.

ಹೌದು. ಹೀಗೆ ರಸ್ತೆಯಲ್ಲಿ ಓಡಾಡುತ್ತಿರುವ ಸಾರಿಗೆ ಬಸ್‌ಗಳು ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿ ತಮ್ಮ ಕಾರ್ಯ ಪ್ರವೃತ್ತಿ ಮೆರೆಯುತ್ತಿರುವ ಬಸ್‌ಗಳು. ಆದರೆ ಇವೆಲ್ಲ ಹೀಗೆ ಕಾರ್ಯ ನಿರ್ವಹಿಸುತ್ತಿದ್ದರೇ ಇತ್ತ ಡಿಪೋ ಒಳಗೆ ಟಯರ್‌ನ ಡಿಸ್ಕ್‌ ಮೇಲೆ ನಿಂತಿರುವ ಚಕ್ರವಿಲ್ಲದ ಬಸ್‌ಗಳು. ಹೀಗೆ ಸಾಲುಗಟ್ಟಿ ನಿಲ್ಲೋಕೆ ಕಾರಣವಾದರೂ ಏನು. ಟೈರ್ ಚೇಂಜ್ ಮಾಡುತ್ತಿರಬಹುದು ಅಂತ ಮೇಲ್ನೋಟಕ್ಕೆ ಅನಿಸುವುದು ಮಾಮೂಲಿ. ಆದರೆ ಇವೆಲ್ಲ ಹೀಗೆ ನಿಂತಿರೋದು ಗುಜರಿಗೆ ಹಾಕುವುದಕ್ಕಾ ಎಂಬುವಂತ ಅನುಮಾನ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ ಧಾರವಾಡ ನಗರದಲ್ಲಿ ಓಡಾಡುವ 210 ಸಾರಿಗೆ ಬಸ್‌ಗಳಲ್ಲಿ ಇದೀಗ 30 ಬಸ್‌ಳನ್ನು ಸಂಚಾರಕ್ಕೆ ಬಿಡದೇ ಹಾಗೆಯೇ ನಿಲ್ಲಿಸಿದ್ದಾರೆ. ಇತ್ತೀಚೆಗೆ ಖರೀದಿಸಿರುವ ಈ ಬಸ್‌ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು ಅದ್ಯಾವ ಮಾನದಂಡವನ್ನಿಟ್ಟು ಗುಜರಿಗೆ ಪ್ಲ್ಯಾನ್ ಮಾಡಿದೆಯಾ ಎನ್ನುವುದೇ ಜನರ ಪ್ರಶ್ನೆಯಾಗಿದೆ. ಆದರೆ ಜನರಿಗೆ ಓಡಾಡಲು ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲದಿದ್ದರೂ ಯಾಕೆ ಈ ನಿರ್ಧಾರ ಎಂಬುವುದು ಅರ್ಥವಾಗುತ್ತಿಲ್ಲ. ಈ ಕುರಿತು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಕೇಳಿದರೆ ಗುಜರಿ ಪ್ಲ್ಯಾನ್ ಇಲ್ಲ ಅಂತಿದ್ದಾರೆ.

ರಾಜ್ಯದ ನಿಧಿಯಿಂದ ತಂದಿರುವ ಈ ಬಸ್ ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಒಂದೇ ಬಾರಿ ಎಲ್ಲ ಹಸಿರು ಬಣ್ಣದ ಬಸ್‌ಗಳನ್ನು ಸಂಸ್ಥೆ ಖರೀದಿ ಮಾಡಿದೆ. ಹೀಗೆ ನಿಲ್ಲಿಸುವುದಕ್ಕೆ ಕಾರಣವನ್ನು ಕೇಳಿದ್ರೆ ಬಸ್ ಗಳ ಟಯರ್ ಚೇಂಜ್ ಮಾಡಬೇಕಿತ್ತು ಅನ್ನುವ ಹಾರಿಕೆಯ ಉತ್ತರ ನೀಡುತ್ತಿರುವ ಅಧಿಕಾರಿಗಳು ಅದು ಹೇಗೆ ತಾನೇ ಬಸ್ ಗಳ ಗುಜರಿ ಮಾರಾಟವನ್ನು ಬಾಯ್ಬಿಟ್ಟು ಹೇಳ್ತಾರೆ ಅನ್ನೋದು ಜನರ ವಾದ. ಇನ್ನೂ ಬಸ್ ಗಳ ಟಯರ್ ಚೇಂಜ್ ಮಾಡಬೇಕು ಅಂದರೆ ಒಂದು ಎರಡು ಟಯರ್ ಗಳನ್ನು ಬದಲಿ ಮಾಡಬೇಕು. ಆದರೆ ಒಮ್ಮಿಲೇ ಇಷ್ಟೊಂದು ಬಸ್ ಗಳ ಟಯರ್ ಗಳನ್ನು ಬದಲಿ ಮಾಡಲು ಹೊರಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಒಟ್ಟಾರೆ ನಿತ್ಯವೂ ಜನರ ಸೇವೆಯಲ್ಲಿ ಇದ್ದ ಬಸ್ ಗಳ ಸ್ಥಿತಿ ಹೀಗಾಗಿದ್ದು, ನಷ್ಟದಲ್ಲಿರುವ ಸಂಸ್ಥೆಗೆ ಗುಜರಿಯೇ ಲಾಭವಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾರ ಲಾಭಕ್ಕೆ ಸಂಸ್ಥೆ ಬಸ್ ಗಳನ್ನು ಗುಜರಿಗೆ ಹಾಕಲು ಮುಂದಾಗಿದೆ ಎನ್ನುವುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

28/09/2021 10:52 pm

Cinque Terre

59.13 K

Cinque Terre

7

ಸಂಬಂಧಿತ ಸುದ್ದಿ