ಅಣ್ಣಿಗೇರಿ: ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಇನ್ನು ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರಿಗೂ ಸುರಿದ ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಸಾರ್ವಜನಿಕರ ಸ್ಥಿತಿ ಅಯೋಮಯವಾಗಿದೆ.
ತಾಲೂಕಿನ ಗ್ರಾಮಗಳಾದ ಭದ್ರಾಪುರ, ನಲವಡಿ, ಮಣಕವಾಡ, ಮಜ್ಜಿಗುಡ್ಡ ಗ್ರಾಮದ ಹಳ್ಳಗಳ ನೀರು ರೈತರ ನೂರಾರು ಎಕರೆಗಳ ಜಮೀನುಗಳಿಗೆ ನುಗ್ಗಿ ಮುಂಗಾರು ಎಲ್ಲ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಇನ್ನೂ ಎಲ್ಲ ಹಳ್ಳಗಳು ರಭಸವಾಗಿ ಹರಿಯುತ್ತಿದ್ದು ಮಣಕವಾಡ ಮತ್ತು ನಲವಡಿ ವಾಹನಗಳ ಸಂಚಾರ ಬಂದ್ ಆಗಿದ್ದು, ರೈತರ ಜಮೀನುಗಳಲ್ಲಿ ಇರುವ ಒಡ್ಡುಗಳು ಹೊಡೆದು ಜಮೀನುಗಳಿಗೆ ನೀರು ಹೋಗಿ ಬೆಳೆಗಳು ಸಂಪೂರ್ಣ ಹಾಳಾಗಿದೆ. ಮಳೆ ತನ್ನ ಆರ್ಭಟವನ್ನು ಹೀಗೆ ಮುಂದುವರೆದರೆ ಮತ್ಯಾವ ಅನಾಹುತಗಳು ಸಂಭವಿಸುತ್ತವೆ ಎಂಬುದು ಕಾದು ನೋಡಬೇಕಾಗಿದೆ.
ನಂದೀಶ, ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
30/08/2022 04:21 pm