ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಧರೆಗುರುಳಿದ ಮನೆ, ಅತಂತ್ರವಾದ ಕುಟುಂಬ

ನವಲಗುಂದ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನವಲಗುಂದ ಭಾಗದಲ್ಲಿ ಪ್ರವಾಹ ಹೆಚ್ಚಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನರು ಹೈರಾಣಾಗಿದ್ದರು. ಅಷ್ಟೇ ಅಲ್ಲದೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳು ಸಹ ನೆಲಕುರಳಿವೆ.

ನವಲಗುಂದ ಪಟ್ಟಣದ ಸಿದ್ದಲಿಂಗೇಶ್ವರ ನಗರದ ಗವಿ ಮಠದ ಬಳಿಯೂ ಸಹ ಮನೆಯೊಂದು ಬಿದ್ದಿದೆ. ಇದರಿಂದ ಸುರೇಶ ಚನ್ನಬಸಪ್ಪ ಮೂಗನ್ನವರ ಎಂಬುವವರ ಕುಟುಂಬ ಬೀದಿಗೆ ಬೀಳುವಂತಾಗಿದೆ.

ಮನೆಯಲ್ಲಿ ದಂಪತಿ ಹಾಗೂ ಮೂರು ಮಕ್ಕಳು ಇದ್ದರು. ಮಂಗಳವಾರ ಬೆಳ್ಳಂ ಬೆಳಗ್ಗೆ ಘಟನೆ ನಡೆದಿದ್ದು, ಸ್ಥಳಕ್ಕೆ ವಾರ್ಡ್ ಸದಸ್ಯ ಹಾಗೂ ಸಂಬಂಧ ಪಟ್ಟ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.

Edited By : Somashekar
Kshetra Samachara

Kshetra Samachara

12/10/2022 02:29 pm

Cinque Terre

39.71 K

Cinque Terre

1

ಸಂಬಂಧಿತ ಸುದ್ದಿ