ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂಬರ 66 ರಲ್ಲಿ ಸಮಸ್ಯೆಗಳ ಆಗರ; ಪಾಲಿಕೆ ಸದಸ್ಯೆ ಪ್ರೀತಿ ಖೋಡೆ ಎಲ್ಲಿದ್ದೀರಾ...?

ಹುಬ್ಬಳ್ಳಿ: ಇದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಈ ವಾರ್ಡ್ ನಲ್ಲಿ ಸಾಕಷ್ಟು ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಆದ್ರೆ ಇಲ್ಲಿನ ಸಮಸ್ಯೆ ಮಾತ್ರ ಹೇಳತೀರದ್ದಾಗಿದೆ. ಇಲ್ಲಿನ ಜನ ಕಾರ್ಪೊರೇಟರನ್ನೇ ನೋಡಿಲ್ವಂತೆ ಇದೆಂತ ವಿಪರ್ಯಾಸ. ಅಷ್ಟಕ್ಕೂ ಆ ವಾರ್ಡ್ ಯಾವುದು ಅಲ್ಲಿನ ಸಮಸ್ಯೆ ಏನೆಂಬುದನ್ನ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ...

ಹೌದು,,,, ಹೀಗೆ ಚರಂಡಿ ಕ್ಲೀನ್ ರಸ್ತೆದಲ್ಲೇ ಹಾಕಿದ್ದು, ಇನ್ನೊಂದಡೆ ಹಳೆ ಗಟರ್ ಮೇಲೆ ಸ್ಲ್ಯಾಪ್ ಹಾಕಿ ಹಣ ನುಂಗುತ್ತಿರುವ ಆರೋಪ. ಇಷ್ಟೆಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾರ್ಡ್ ನಂಬರ 66 ರಲ್ಲಿ ಬರುವ ಕಮರಿಪೇಟ್ ಮಹಾವೀರ ಓಣಿ ಶಾಂತಿನಾಥ ಭವನದ ಹತ್ತಿರ.

ಇಲ್ಲಿ ಮೂರು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ವತಿಯಿಂದ ಗಟರ ನಿರ್ಮಾಣ ಮಾಡಲಾಗಿತ್ತು. ಇದರಿಂದ ಇಲ್ಲಿನ ನಿವಾಸಿಗಳ ವ್ಯಾಪಾರಸ್ಥರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಯಾಕೆಂದರೆ ಒಂದು ಸಣ್ಣ ಮಳೆಯಾದ್ರೆ ಸಾಕು ಗಟರ ತುಂಬಿ ನೀರೆಲ್ಲ ಮನೆ ಒಳಗೆ ನುಗ್ಗುತ್ತಿತ್ತು.

ಸದ್ಯ ಸ್ಮಾರ್ಟ್ ಸಿಟಿ ಅಡಿಯಲ್ಲಿ ಗಟರ ನಿರ್ಮಾಣ ಮಾಡುತ್ತಿದ್ದಾರೆ. ಆದ್ರೆ ಹೊಸ ಗಟರ ಅಲ್ಲ,,, ಅದೇ ಹಳೆ ಗಟರೇಲೆ ಸ್ಲ್ಯಾಪ್ ಹಾಕುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ಕಾರ್ಪೊರೇಟರ್ ಪ್ರೀತಿ ಖೋಡೆ ಅವರಿಗೆ ಜನ ಹೇಳಿದ್ರೆ ಕ್ಯಾರೆ ಮಾಡುತ್ತಿಲ್ವಂತೆ.

ಅಷ್ಟೇ ಅಲ್ಲದೆ ಪ್ರೀತಿ ಖೋಡೆ ಪಾಲಿಕೆ ಸದಸ್ಯೆಯಾಗಿ ಅಧಿಕಾರ ಕೂಡ ಸ್ವೀಕಾರ ಮಾಡಿದ್ದಾರೆ. ಪಾಲಿಕೆಯಿಂದ ವಾರ್ಡ್ ಸಮಸ್ಯೆಗಳನ್ನು ಬಗೆ ಹರಿಸಲು 50 ಲಕ್ಷ ರೂಪಾಯಿ ಕೂಡ ಬಿಡುಗಡೆಯಾಗಿದೆ. ಆದ್ರೇ ಏನ ಪ್ರಯೋಜನ ಇನ್ನೂವರೆಗೂ ವಾರ್ಡ್ ಜನ ಅವರನ್ನು ನೋಡಿಯೇ ಇಲ್ವಂತೆ.

ಇಲ್ಲಿ ಸರಿಯಾಗಿ ಕುಡಿಯಲು ನೀರು ಬರುತ್ತಿಲ್ವಂತೆ, ಗಟರ ಸಮಸ್ಯೆ ಬಗ್ಗೆ ಹೇಳು ಹೋದ್ರೆ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆಂದು ಇಲ್ಲಿನ ಜನರು ಕಾರ್ಪೊರೇಟರ್ ಪ್ರೀತಿ ಖೋಡೆ ಮೇಲೆ ಆರೋಪ ಮಾಡುತ್ತಿದ್ದಾರೆ.

ಇನ್ನು ಈ ಕಾರ್ಪೊರೇಟರ್ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದು ಪೋಟೋಗೆ ಪೋಸ್ ಕೊಟ್ಟು ಹೋಗುತ್ತಾರೆ. ಆ ಕೆಲಸ ಹೇಗೆ ನಡೆಯುತ್ತದೆ, ಎಷ್ಟು ಗುಣಮಟ್ಟವಾಗಿದೆ ಎಂಬುದನ್ನು ನೋಡುದಿಲ್ವಂತೆ... ಮಿಸ್ ಪ್ರೀತಿ ಖೋಡೆ ಅವರೆ ನೀವು ಜನರ ಕಷ್ಟಕ್ಕೆ ಸ್ಪಂದನೆ ನೀಡಿ ಅವರ ಸಮಸ್ಯೆಗಳನ್ನು ಬಗೆಹರಿಸಿ....

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Somashekar
Kshetra Samachara

Kshetra Samachara

07/10/2022 04:17 pm

Cinque Terre

41.74 K

Cinque Terre

4

ಸಂಬಂಧಿತ ಸುದ್ದಿ