ಧಾರವಾಡ: ಪಿಎಸ್‌ಐ ಪರೀಕ್ಷಾ ಹಗರಣ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪಿಎಸ್‌ಐ ಅಭ್ಯರ್ಥಿಗಳು ಕರಾಳ ದಿನ ಆಚರಣೆ ಮಾಡಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಅಭ್ಯರ್ಥಿಗಳು ಕರಾಳ ದಿನ ಆಚರಿಸಿದರು.
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದು, ಒಂದು ವರ್ಷವಾಗಿದೆ. ಈ ಅಕ್ರಮ ಬಯಲಿಗೆ ಬಂದು ಇದೀಗ ಸರ್ಕಾರ ನೇಮಕಾತಿಯನ್ನು ರದ್ದುಪಡಿಸಿದೆ. ಹೀಗಾಗಿ ಕೂಡಲೇ ಮರು ಪರೀಕ್ಷೆ ನಡೆಸಬೇಕು ಎಂದು ಅಭ್ಯರ್ಥಿಗಳು ಕರಾಳ ದಿನದ ಮೂಲಕ ಒತ್ತಾಯಿಸಿದರು.
ಈಗಾಗಲೇ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರ ಬಂಧನವಾಗಿದೆ. ಇದರಲ್ಲಿ ನ್ಯಾಯಯುತವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯ ಅನುಭವಿಸುವಂತಾಯಿತು. ಕೂಡಲೇ ಸರ್ಕಾರ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದರು.
Kshetra Samachara
03/10/2022 12:44 pm