ನವಲಗುಂದ : ಬೆಣ್ಣೆ ಹಳ್ಳದ ಪ್ರವಾಹಕ್ಕೆ ತುತ್ತಾಗಿ ಹಾನಿಯಾದ ಪ್ರದೇಶಗಳಿಗೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ಕಾಳಜಿ ಕೇಂದ್ರ ಹಾಗೂ ಪರಿಹಾರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನವಲಗುಂದ ವಿಧಾನ ಸಭಾ ಕ್ಷೇತ್ರದ ಕಿರೇಸೂರ, ಅರೆಕುರಹಟ್ಟಿ, ಖನ್ನೂರ, ಬೋಗಾನೂರ ಗ್ರಾಮಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭೇಟಿ ನೀಡಿ, ಖನ್ನೂರ ಹಾಗೂ ಶಲವಡಿ ನಡುವಿನ ಸೇತುವೆ ಕುಸಿದ ಹಿನ್ನೆಲೆ ಸ್ಥಳ ವೀಕ್ಷಣೆ ಮಾಡಿದರು.
ಇದೆ ವೇಳೆ ಬೋಗಾನೂರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ತಿಪ್ಪಣ್ಣ ಮಾದರ ಎಂಬ ರೈತ ಪ್ರವಾಹಕ್ಕೆ ತನ್ನ ಮನೆ ಮಠವನ್ನು ಕಳೆದುಕೊಂಡು ಜಿಲ್ಲಾಧಿಕಾರಿ ಎದುರು ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟನು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ 'ಅಳಬೇಡಪ್ಪ ನಾವಿದ್ದೇವೆ' ಎಂದು ಧೈರ್ಯ ತುಂಬಿದರು.
ಈ ಬಗ್ಗೆ ತಾಲೂಕಾ ಪಂಚಾಯತ್ ಇಒ ಎಸ್ ಎಂ ಕಾಂಬ್ಳೆಗೆ ತರಾಟೆಗೆ ತೆಗೆದುಕೊಂಡರು. ತಗಡಿನ ಶಡ್ ನಲ್ಲಿರುವ ರೈತನಿಗೆ ಬೇರೆ ಕಡೆ ಸ್ಥಳಾಂತರ ಮಾಡಲು ಸೂಚನೆ ನೀಡಿದರು.
Kshetra Samachara
06/09/2022 07:59 pm