ನವಲಗುಂದ: ನಮ್ಮ ನವಲಗುಂದದಲ್ಲಿ ಆಸ್ಪತ್ರೆಗಳ ಅವಸ್ಥೆ ಹೇಳತೀರದ್ದಾಗಿದೆ. ಅದು ಮನುಷ್ಯರ ಆಸ್ಪತ್ರೆ ಇರಬಹುದು, ಪಶು ಆಸ್ಪತ್ರೆ ಆಗಿರಬಹುದು. ಎರಡರ ದುಸ್ಥಿತಿ ಕೂಡ ಒಂದೇ ಆಗಿದೆ. ಆವರಣದಲ್ಲಿ ಮಳೆಯಿಂದ ನೀರು ನಿಂತು ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಹೌದು... ಆರೋಗ್ಯದ ಸಮಸ್ಯೆಯಿಂದ ತಾಲೂಕಾಸ್ಪತ್ರೆಗೆ ಹೋದ್ರೆ ಅಲ್ಲಿ ನೀರು ತುಂಬಿದ ಗುಂಡಿಗಳು ಹಾಗೂ ಹಂದಿಗಳ ಅಡ್ಡೆ. ಇನ್ನು ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿನ ಸೂಚನಾ ಫಲಕದ ಎದುರೇ ಮೂತ್ರ ವಿಸರ್ಜನೆ ಸೇರಿದಂತೆ ದುಶ್ಚಟಗಳ ಅಡ್ಡೆಯಾಗಿದೆ. ಇದೆಲ್ಲಾ ಸಮಸ್ಯೆಗಳು ಒಂದೆಡೆ ಆದ್ರೆ ಇನ್ನೊಂದೆಡೆ ನೀರು ತುಂಬಿದ ಆವರಣ.
ಇಲ್ಲಿಗೆ ಬರುವಂತಹ ರೈತರು ತಮ್ಮ ಪಶುಗಳನ್ನು ಒಳಗೆ ಕರೆದೊಯ್ಯಲು ಪರದಾಟ ನಡೆಸುವಂತಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲ ಕೆಸರು ಕಾಣುತ್ತೆ, ರೈತರಿಗೆ ಹಾಗೂ ಪ್ರಾಣಿಗಳಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
- ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
19/07/2022 12:58 pm