ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಸುಗಲ್ ರಸ್ತೆಯಲ್ಲಿ ಅಡಗಿದ್ದಾನೆ ಜವರಾಯ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಹುಬ್ಬಳ್ಳಿ: ಒಂದು ಸಣ್ಣ ಮಳೆ ಬಂದ್ರೆ ಸಾಕು ರಸ್ತೆ ಸಂಪೂರ್ಣ ಕೆಸರುಮಯ. ಇಂತಹ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡಬೇಕಾದ್ರೆ ಕೈಯಲ್ಲಿ ಜೀವ ಹಿಡಿದುಕೊಂಡಿರುತ್ತಾರೆ. ಅದೆಷ್ಟೋ ಬಾರಿ ಸ್ಥಳೀಯರು ರಸ್ತೆ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಏನೇನೂ ಪ್ರಯೋಜನವಾಗಿಲ್ಲ. ಅಷ್ಟಕ್ಕೂ ಅಲ್ಲಿನ ಅವ್ಯವಸ್ಥೆ ಹೇಗಿದೆ ತೋರಿಸ್ತೀವಿ ನೋಡಿ.

ಹೀಗೆ ಕೆಸರುಮಯ ರಸ್ತೆ ಮೇಲೆ ನಿಂತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಸ್ಥಳೀಯರು. ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಗಂಗಾಧರ ನಗರದಲ್ಲಿ. ಇಲ್ಲಿ ಸುಮಾರು ವರ್ಷಗಳಿಂದ ನಿರಂತರವಾಗಿ ಇಂತಹ ಸಮಸ್ಯೆಯಿಂದ ಇಲ್ಲಿನ ಜನರು ಬಳಲುತ್ತಿದ್ದಾರೆ. ಇನ್ನು ಈ ರಸ್ತೆಯಲ್ಲಿಯೇ ಶಾಲಾ ಮಕ್ಕಳು ಶಾಲೆಗೆ ತರಳುತ್ತಿದ್ದು, ಅದೆಷ್ಟೋ ಮಕ್ಕಳು ಕೆಸರಿನಲ್ಲಿ ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿವೆ. ರಸ್ತೆ ದುರಸ್ತಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲವಂತೆ. ಸದ್ಯ ಇರುವ ಗ್ರಾಮ ಪಂಚಾಯತ್ ಸದಸ್ಯರು ಕೂಡ ಈ ಜನರ ಸಮಸ್ಯೆಗೆ ಕ್ಯಾರೆ ಎನ್ನದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಗರಂ ಆಗಿದ್ದಾರೆ.

ಒಟ್ಟಿನಲ್ಲಿ ಇಂತಹ ದೊಡ್ಡ ಸಮಸ್ಯೆ ಇದ್ರೂ ಕೂಡ ಕ್ಯಾರೆ ಎನ್ನದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಇದ್ದರೆ ಏನು ಪ್ರಯೋಜನ? ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಉತ್ತಮ ರಸ್ತೆ ಮಾಡಿ ಸ್ಥಳೀಯರ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Somashekar
Kshetra Samachara

Kshetra Samachara

11/07/2022 01:32 pm

Cinque Terre

26.7 K

Cinque Terre

1

ಸಂಬಂಧಿತ ಸುದ್ದಿ