ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿಯೊಂದು ಏರಿಯಾಗಳಲ್ಲಿ ಮಹಾನಗರ ಪಾಲಿಕೆ ಗಾರ್ಡನ್ ವ್ಯವಸ್ಥೆ ಮಾಡಿಕೊಟ್ಟಿದೆ. ಆದ್ರೆ ಅದರ ಮುಂದಿನ ನಿರ್ವಹಣೆ ಮಾತ್ರ ನಮ್ಮನ್ನು ಕೇಳಬೇಡಿ. ಸರಿಯಾಗಿ ಟ್ಯಾಕ್ಸ್ ಮಾತ್ರ ತುಂಬಿ ಎನ್ನುತ್ತಾರೆ ಈ ಪಾಲಿಕೆ ಅಧಿಕಾರಿಗಳು. ಈ ಗಾರ್ಡನ್ ನಲ್ಲಿ ಜನರು ವಾಯುವಿಹಾರಕ್ಕೆ ಬರಬೇಕಾದರೆ ಭಯದಿಂದ ಬರುವಂತಹ ಪರಿಸ್ಥಿತಿ ಎದುರಾಗಿದೆ.
ಕಾಡಿನಂತೆ ಬೆಳೆದಿದರು ಕಸ, ಕಂಟಿ, ನಡೆದಾಡುವ ಟ್ರಾಕ್ ಮೇಲೆ ಕೂಡ ಕಸ ಬೆಳೆದು ನಿಂತಿದೆ. ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು ವಾರ್ಡ್ ನಂ 49 ರಲ್ಲಿ ಬರುವ ಲಿಂಗರಾಜ ನಗರ ರೋಡ್, ಶೆಟ್ಟರ್ ಲೇಔಟ್‌ನಲ್ಲಿಯ ಗಾರ್ಡನ್ ನಲ್ಲಿ. ಇಲ್ಲಿ ಯಾವುದೇ ರೀತಿ ನಿರ್ವಹಣೆ ಇಲ್ಲದೆ ಗಾರ್ಡನ್ ಅನ್ನೊದು ಕಾಡಿನಂತಾಗಿದೆ. ಇಲ್ಲಿನ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ಗಾರ್ಡನ್ ಸ್ವಚ್ಛತೆ ಮಾಡಿಸಿ ಎಂದು ಅದೆಷ್ಟೋ ಬಾರಿ ಮನವಿ ಮಾಡಿಕೊಂಡರು ಯಾರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ. ಅದು ಇದು ಟ್ಯಾಕ್ಸ್ ತುಂಬಿ ಅಂತಾರೆ. ಆದ್ರೆ ಮೂಲಭೂತ ಸೌಕರ್ಯಗಳನ್ನು ಕೇಳಬೇಡಿ ಎನ್ನುತ್ತಾರೆಂದು ಸ್ಥಳೀಯರು ಪಾಲಿಕೆ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಈಗಾಗಲೇ ಪಾಲಿಕೆ ಸದಸ್ಯರಿಗೆ ಅಧಿಕಾರ ಸಿಕ್ಕಿದೆ. ಕೇವಲ ಮತ ಕೇಳುದಕ್ಕೆ ಅಷ್ಟೇ ಅಲ್ಲದೆ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಅಷ್ಟೇ ಅಲ್ಲದೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಈ ಗಾರ್ಡನ್ ನ್ನು ಆದಷ್ಟು ಬೇಗ ಸ್ವಚ್ಛ ಮಾಡಿಸಿ ಅಲ್ಲಿನ ಜನರಿಗೆ ವಾಯುವಿಹಾರ ಮಾಡಲು ಅನುಕೂಲ ಮಾಡಿ ಕೊಡಬೇಕಾಗಿದೆ.
Kshetra Samachara
02/06/2022 12:29 pm