ಹೌದು ! ಎರಡು ನೂರಕ್ಕೂ ಅಧಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕಾದ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳು ಶಿಥಿಲಾವಸ್ಥೆ ತಲುಪಿ ಮಳೆ ಬಂದರೆ ಸಾಕು ಸೋರುತ್ತವೆ.
ಶಾಲೆಯ ಮೇಲ್ಛಾವಣಿ ಸಿಮೆಂಟ್ ಪದರು ಕೀಳುತ್ತಲಿದ್ದರೆ, ನೆಲಹಾಸು ಕಲ್ಲುಗಳು ಮಕ್ಕಳಿಗೆ ತಾಗಿ ಬೀಳುವಂತಿವೆ, ಗೋಡೆಯಲ್ಲಿನ ಇಟ್ಟಿಗೆಗಳು ಕಾಣುವಂತೆ ಶಾಲೆ ಬಿರುಕು ಬಿಟ್ಟು ಪರಿಣಾಮ ಎಲ್ಲೆಡೆ ಕಬ್ಬಿಣ ರಾಡ್ ಎದ್ದಿದ್ದು ಸರ್ಕಾರಿ ಶಾಲೆ ಇದೀಗ ಅಪಾಯದ ಕೂಪವಾಗಿದೆ.
ಶಾಲಾ ಆವರಣದಲ್ಲಿ ಒಂದೇಡೆ ಫೆವರ್ಸ್ ಇದ್ದರೆ, ಇನ್ನೊಂದೆಡೆ ಅದೇ ರಾಡಿ, ಮಣ್ಣಿನ ಜೊತೆಗೆ ನಲ್ಲಿ ಸಮೀಪ ಕೆಸರು ಸಂಗ್ರಹವಾಗಿ ಮಕ್ಕಳಿಗೆ ರೋಗದ ಭೀತಿ ಎದುರಾಗಿದೆ. ಈ ಅವ್ಯವಸ್ಥೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದ್ರೆ ಅವರ ಅಭಿಪ್ರಾಯ ಹೀಗಿದೆ.
ಶಾಲೆ ಆವರಣದಲ್ಲಿನ ನಾಲ್ಕು ಕೊಠಡಿಗಳು ಬೀಳುವ ಹಂತದಲ್ಲಿದ್ದು ಉಪಯೋಗವಿಲ್ಲದೆ ಬೀಗ ಜಡಿದಿವೆ. ಈ ಕಾರಣ ಮಕ್ಕಳಿಗೆ ಆಟ-ಪಾಠ ಸೇರಿದಂತೆ ಇತರೆ ಶೈಕ್ಷಣಿಕ ಚಟುವಟಿಕೆಗೆ ಸಮಸ್ಯೆ ಎದುರಾಗಿ ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ಶಾಲಾ ಅವ್ಯವಸ್ಥೆಯೆ ಅಡ್ಡಿಯಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/06/2022 03:16 pm