ಕುಂದಗೋಳ : ಉತ್ತಮ ಆರೋಗ್ಯ ಸಮತೋಲನ ಬದುಕಿಗೆ ಶುದ್ಧ ನೀರಿನ ಸೇವನೆ ಅತಿ ಮುಖ್ಯವಾದುದು ಅಂತಹ ನೀರು ವಿನಾಕಾರಣ ಹರಿದು ಚರಂಡಿ ಸೇರಿದ್ರೆ ಎನ್ಮಾಡೋದು ಅಲ್ವಾ ?
ಹೌದು ! ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಿಂದ ತಹಶೀಲ್ದಾರ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಒಳಗಿನ ಸಿಹಿ ನೀರಿನ ಪೈಪ್ ಒಡೆದ ಪರಿಣಾಮ ಜೀವ ಜಲ ಬೆಳಿಗ್ಗೆಯಿಂದಲೇ ಹರಿದು ಚರಂಡಿ ಸೇರುತ್ತಿದ್ರೂ ಸಂಬಂಧಪಟ್ಟವರು ಇನ್ನೂ ಗಮನಿಸಿಲ್ಲ.
ಈ ರಸ್ತೆಯಲ್ಲಿ ಭಾರೀ ಗಾತ್ರದ ವಾಹನ ಟಿಪ್ಪರ್ ಲಾರಿ ಸಂಚರಿಸುವ ಕಾರಣ ಮೊನ್ನೆ ತಾನೇ ಒಡೆದು ಹೋದ ಪೈಪನ್ನ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸರಿ ಮಾಡಿ ಹೋಗಿದ್ದರು, ಆದ್ರೆ ಮತ್ತೀಗ ಬೇರೆಡೆ ಪೈಪ್ ಒಡೆದಿದ್ದು ರಸ್ತೆಯುದ್ದಕ್ಕೂ ನೀರು ಹರಿದು ಚರಂಡಿ ಸೇರುತ್ತಿದೆ.
ಭಾರಿ ಗಾತ್ರದ ವಾಹನ ಸಂಚಾರದಿಂದ ಡಾಂಬರ್ ರಸ್ತೆಯಲ್ಲಿ ಬಿರುಕು ಮೂಡುತ್ತಿವೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ಕಂಡುಕೊಂಡು ಜೀವ ಜಲ ರಕ್ಷಿಸಬೇಕಿದೆ.
Kshetra Samachara
28/09/2020 06:54 pm