ಕಲಘಟಗಿ : ಪಟ್ಟಣದ ಬಸ್ಸ್ ನಿಲ್ದಾಣ ಗ್ರಾಮೀಣ ಸಾರಿಗೆ ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ಇಲ್ಲದೆ ಬಿಕೋ ಎನ್ನುವ ವಾತಾವರಣ ಇತ್ತು.
ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾದ ಕಾಯ್ದೆ ವಿರೋಧಿಸಿ ರಾಜ್ಯ ಬಂದ್ ಕಾರಣ ಇಲ್ಲಿನ ಬಸ್ಸ್ ನಿಲ್ದಾಣದಲ್ಲಿ ಗ್ರಾಮೀಣ ಬಸ್ಸ್ ಗಳ ಸಂಚಾರ ಇರಲಿಲ್ಲ ಆದರೆ ದೂರದ ಕಾರವಾರ ಹುಬ್ಬಳ್ಳಿಯ ಬಸ್ಸ್ ಸಂಚರಿಸಿದವು.
ಬೆಳಿಗ್ಗೆ ಯಿಂದಲೇ ಗ್ರಾಮೀಣ ಸಾರಿಗೆ ಇರಲಿಲ್ಲ ಆದರೆ ಹುಬ್ಬಳ್ಳಿ,ಕಾರವಾರ ಬಸ್ಸ್ ಸಂಚರಿಸಿದವು.ಬಸ್ಸ್ ನಿಲ್ದಾಣದ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿತ್ತು.
Kshetra Samachara
28/09/2020 05:09 pm