ಕಲಘಟಗಿ:ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಕಾರಣ ಹೇಳಿ ಬಾರ ತೆರೆದರು,ಹಾಗಾದರೇ ಯಡಿಯೂರಪ್ಪ ಸರಕಾರ ಇವತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಲ್ಲ ಕುಡಕರ ಸರಕಾರವೇ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉತ್ತರ ಕರ್ನಾಟಕದ ಗೌರವ ಅಧ್ಯಕ್ಷ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಶಶಿಕಾಂತ ಪಡಸಲಗಿ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣದಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ನಡೆಸಿದ ಪ್ರತಿಭಟನೆಯನ್ನುದ್ದಶಿಸಿ ಮಾತನಾಡಿದ ಅವರು,
ಸರಕಾರವು ಜಾರಿಗೆ ತಂದ ರೈತ ವಿರೋದಿ ಕಾನೂನು ಎಪಿಎಂಸಿ ಕಾಯ್ದೆ ,ಭೂ ಸುದಾರಣೆ ಮಸೂದೆ ಕಾಯ್ದೆ,ವಿದ್ಯುತ್ ಕಾಯ್ದೆ ,ಇನ್ನು ಅನೇಕ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.ನಂತರ ತಹಶೀಲ್ದಾರಗೆ ಮನವಿ ನೀಡಲಾಯಿತು.
ರೈತ ಸಂಘದ ತಾಲೂಕಾ ಅಧ್ಯಕ್ಷ ಮಾಜಿ ನಿವೃತ್ತ ಯೋಧ ಶಿವನಗೌಡ ಸಿಂದೋಗಿ,ಜಿಲ್ಲಾ ಸಂಚಾಲಕ ಸುರೇಶ ದೊಡ್ಮನಿ,ರೈತ ಮುಖಂಡ ಕಲ್ಮೇಶ ಲಿಗಾಡೆ,ಜಿಲ್ಲಾ ಕಾರ್ಯಾಧ್ಯಕ್ಷ ರವಿ ತಿರ್ಲಾಪುರ,ದಲಿತ ಸಂಘರ್ಷ ಸಮಿತಿ ಚಂದ್ರಕಾಂತ್ ಕಾದ್ರೊಳ್ಳಿ ಬಣ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ ದೊಡ್ಡಮನಿ,ತಾಲೂಕು ಅಧ್ಯಕ್ಷ ಶರೀಫ್ ಹರಜನ, ಶರಣಪ್ಪ ಹೊಸಮನಿ
ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ರೈತ ಮಹಿಳೆಯರು ಉಪಸ್ಥಿತರಿದ್ದರು.
Kshetra Samachara
28/09/2020 05:45 pm