ಕಲಘಟಗಿ : ರೈತರಿಗೆ ಮಾರಕವಾದ ಕಾಯ್ದೆ ವಿರೋಧಿಸಿ ರಾಜ್ಯ ಬಂದ್ ಗೆ ಬ್ಲಾಕ್ ಕಾಂಗ್ರೆಸ್ ಬೆಂಬಲಿಸಿತು.
ಎ ಪಿ ಎಂ ಸಿ ಯಿಂದ ಹೆದ್ದಾರಿ ಮೂಲಕ ಪ್ರತಿಭಟನಾ ರ‍್ಯಾಲಿ ಆಂಜನೆಯ ಸರ್ಕಲ್ ವರೆಗೂ ಆಗಮಿಸಿ ರಸ್ತೆತಡೆ
ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರಕಾರದ ಧೋರಣೆ ಖಂಡಿಸಿದರು.
ರೈತರಿಗೆ ಅನ್ಯಾಯವಾದರೆ ನಾವು ಸಹಿಸೊದಿಲ್ಲಾ ರೈತರ ಜತೆ,ನಾವು ಸದಾಕಾಲ ಇರುತ್ತೆವೆ,ರೈತರ ವಿರೋಧಿ ಕಾಯ್ದೆಯನ್ನು ಶೀಘ್ರ ತೆಗೆಯಬೇಕು,ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಉಗ್ರ ಹೊರಾಟ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಕಿಡಿ ಕಾರಿದರು.ಜಿಲ್ಲಾ ಅಧ್ಯಕ್ಷ ಲಿಂಗರಡ್ಡಿ ನಡುವಿನಮನಿ,ಅಜಮತ್ ಜಹಗೀರದಾರ,ಮಾಲಾ ತುರಿಹಾಳ,ಎಸ್ ಆರ್ ಪಾಟೀಲ,ಹನುಮಂತ ಹರಿಜನ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
28/09/2020 03:17 pm