ಪಬ್ಲಿಕ್ ನೆಕ್ಸ್ಟ್ ವಿಶೇಷ, ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ಉತ್ತರ ಕರ್ನಾಟಕದ ಜಾನುವಾರು ಸಂತೆಗಳಲ್ಲಿ ಕಲಘಟಗಿ ಜಾನುವಾರು ಸಂತೆಯೂ ಸಹ ತನ್ನದೇ ಆದ ಹೆಸರು ಹೊಂದಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುವ ಮಂಗಳವಾರದ ಜಾನುವಾರುಗಳ ಸಂತೆಯನ್ನು ದನದ ಪ್ಯಾಟಿ ಅಂತಾನೇ ರೈತರು ಕರೆಯುತ್ತಾರೆ.ಸುತ್ತಮುತ್ತಲಿನ ಗ್ರಾಮಗಳ ಜವಾರಿ ಹಾಗೂ ದೇಶಿ ತಳಿಯ
ತರೆಹವಾರಿ ಜಾನುವಾರುಗಳು ಮಾರಾಟಕ್ಕೆ ಹಾಗೂ ಖರೀದಿಗೆ ಲಭ್ಯವಿರುತ್ತವೆ.
ಎತ್ತು,ಆಕಳು,ಕರು,ಎಮ್ಮೆ,ಹೋರಿಗಳ ವ್ಯಾಪಾರ ಬಲು ಜೋರಾಗಿಯೇ ನಡೆಯುತ್ತದೆ. ಲಾಕ್ ಡೌನ್ ನಂತರ ದನದ ಪ್ಯಾಟಿ ಪ್ರಾರಂಭವಾಗಿದ್ದು, ಜಾನುವಾರುಗಳ ಮಾರಾಟ ಕ್ಕೆ ಹಾಗೂ ಖರೀದಿಗೆ ರೈತರು ಚೌಕಾಸಿ ಮಾಡುವ ದೃಶ್ಯ ಸಾಮಾನ್ಯವಾಗಿವೆ.
ಧಾರವಾಡ,ಹುಬ್ಬಳ್ಳಿ,ಹಾವೇರಿ,ಕುಂದಗೋಳ, ಮುಂಡಗೋಡ,ಹಳಿಯಾಳ,ಕಿರವತ್ತಿಯ ಗ್ರಾಮೀಣ ಭಾಗದ ರೈತರು ಜಾನುವಾರುಗಳ ಖರೀದಿಗೆ ಕಲಘಟಗಿ ದನದ ಪ್ಯಾಟಿಗೆ ಬರುವುದು ವಾಡಿಕೆ.
ಇದರ ಮಧ್ಯೆ ಜಾನುವಾರುಗಳ ಬೆಲೆಯೂ ಹುಬ್ಬೆರಿಸುವಂತಿದೆ.30 ಸಾವಿರದಿಂದ 1.5 ಲಕ್ಷದ ವರೆಗಿನ ದನದ ವ್ಯಾಪಾರ ಇಲ್ಲಿ ನಡೆಯುತ್ತದೆ. ನೀವು ಪ್ರಾಣಿ ಪ್ರೀಯರಾಗಿದ್ದು ಜಾನುವಾರುಗಳನ್ನು ಕೊಳ್ಳಬೇಕೆಂದ್ರೆ ಕಲಘಟಗಿ ಪೇಟೆಗೆ ಭೇಟಿ ನೀಡಿ.
Kshetra Samachara
24/09/2020 05:13 pm