ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಳು ಬಿದ್ದ ಸ್ಮಶಾನವೀಗ ಫಳಫಳ!; ಹಳೆವಿದ್ಯಾರ್ಥಿ ಸಂಘ ಸೇವೆಗೆ ನಟ ಅನಿರುದ್ಧ ಫಿದಾ

ಹುಬ್ಬಳ್ಳಿ: ಹೌದು... ನಮ್ಮ ಹುಬ್ಬಳ್ಳಿಯ ಸ್ಮಶಾನಗಳನ್ನು ನೋಡಿದ್ರೆ ಹಗಲು ಹೊತ್ತಿನಲ್ಲೇ ಭಯಭೀತಿಯಿಂದ ಓಡಿ ಹೋಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಗಿಡಗಂಟಿಗಳು, ಕಸ-ತ್ಯಾಜ್ಯ ರಾಶಿ ಇತ್ಯಾದಿ "ಮೋಕ್ಷಧಾಮ" ವನ್ನು ಆವರಿಸಿ, ಪಾಳು ಬೀಳಿಸಿದೆ!

ಆದರೆ, ಇದೆಲ್ಲದರ ಮಧ್ಯೆ ಹುಬ್ಬಳ್ಳಿಯ ಹಳೆವಿದ್ಯಾರ್ಥಿಗಳ ಸಂಘ "ಸ್ವಚ್ಛ ಭಾರತ ಅಭಿಯಾನ" ವನ್ನು ಮಾದರಿಯಾಗಿಟ್ಟುಕೊಂಡು ನೇಕಾರನಗರದ ಈಶ್ವರನಗರ ಹಳೆ ಹುಬ್ಬಳ್ಳಿ  ರುದ್ರಭೂಮಿಯ ಕಂಪೌಂಡ್ ಮುಂಭಾಗ  ಶುಚಿಗೊಳಿಸಿದ್ದಾರೆ.

ಪೊದೆಗಳಿಂದ ಕೂಡಿದ್ದ ಸ್ಮಶಾನದ ಗೋಡೆ ಇದೀಗ ಬಣ್ಣದ ಹೊಳಪು ಪಡೆದು ಕಂಗೊಳಿಸುತ್ತಿದೆ. ಹಳೆ ವಿದ್ಯಾರ್ಥಿ ಸಂಘದ ಸೇವಾ ಕೈಂಕರ್ಯಕ್ಕೆ ಚಿತ್ರನಟ ಅನಿರುದ್ಧ್ ಹಾಗೂ ಕಮಿಷನರ್ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಹಳೆ ವಿದ್ಯಾರ್ಥಿ ಸಂಘದ ಎ.ಎ. ಮಿರ್ಜಿ, ಸಹದೇವ, ವಿಶ್ವನಾಥ್ ಪವರ್, ಮಂಜುನಾಥ್ ಗುಡಿಸಾಗರ,  ಮಂಜುನಾಥ್ ತಡಸ್, ವಿಶಾಲ್,  ಮಾರುತಿ, ಅನಿಲ್ ಜಾಧವ್ ಅವರ ತಂಡ "ಮುಕ್ತಿಸ್ಥಳ" ಕಂಗೊಳಿಸಲು ಶ್ರಮ ವಹಿಸಿದೆ. ಹಳೆವಿದ್ಯಾರ್ಥಿಗಳ ಸಮಾಜಮುಖಿ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Edited By : Somashekar
Kshetra Samachara

Kshetra Samachara

28/06/2022 06:26 pm

Cinque Terre

27.82 K

Cinque Terre

0

ಸಂಬಂಧಿತ ಸುದ್ದಿ