ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಳೆರಾಯನ ಅವಾಂತರಕ್ಕೆ ಕುಸಿದ ಮನೆ ಗೋಡೆ, ಬೀದಿಗೆ ಬಂದ ಸಂತ್ರಸ್ತರ ಬದುಕು!

ಧಾರವಾಡ: ಧಾರವಾಡದಲ್ಲಿ ಸುರಿಯುತ್ತಿರುವ ಮಳೆಗೆ ಈಗ ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆಗಳು ಧರೆಗುರುಳಿವೆ. ಸುರಿದ ಮಳೆಗೆ ಭಾನುವಾರ ನಗರದ ದಾನುನಗರದಲ್ಲಿ ಮನೆಯು ಭಾಗಶಃ ನೆಲಕ್ಕಚ್ಚಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು ಧಾರವಾಡ ದಾನುನಗರದ ಬಿಬಿ ಜಾನ್ ಮಕ್ತುಮ್ ಸಾಬ್ ನದಾಫ್ ಎಂಬುವವರಿಗೆ ಸೇರಿದ ಮನೆಯ ಒಂದು ಭಾಗ ಬಹುತೇಕ ಹಾನಿಯಾಗಿದ್ದು, ಸತತವಾಗಿ ಸುರಿದ ಮಳೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಘಟನೆ ಬೆಳಗಿನ ಜಾವ ಏಳು ಗಂಟೆಯ ಸುಮಾರಿಗೆ ಸಂಭವಿಸಿದ್ದು, ಈ ವೇಳೆ ಮಕ್ಕಳು ಸ್ಥಳದಲ್ಲಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಇನ್ನು ಘಟನೆಯಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ಸಹಾಯಕ್ಕಾಗಿ ಸರ್ಕಾರದ ಎದುರು ಮನವಿ ಸಲ್ಲಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/06/2022 06:20 pm

Cinque Terre

27.99 K

Cinque Terre

1

ಸಂಬಂಧಿತ ಸುದ್ದಿ