ಕುಂದಗೋಳ: ಬದುಕಿನ ಬಂಡಿಗೆ ಎಲ್ಲರಿಗೂ ಅವರದೇ ಆದ ಕಾಯಕ ಇರುತ್ತೆ. ಇಲ್ಲೊಬ್ಬರ ಕಾಯಕ ಒಂದೆಡೆ ನಿಲ್ಲದು. ಒಂದೆಡೆ ಕೂರದು. ಹೀಗೆ ಸಾಗುತ್ತ ರೈತಾಪಿ ಕುಲವನ್ನು ಅರಸುತ್ತಿದೆ. ಇಂತಹ ಕಾಯಕಯೋಗಿಗಳು ಕಂಡಿದ್ದು, ಕುಂದಗೋಳ ಪಟ್ಟಣದಲ್ಲಿ. ಎಲ್ಲೆಡೆ ಉರಿ ಬಿಸಿಲು ಸೂಸುವ ದಿನಗಳಲ್ಲಿ ಇವರು ನಿತ್ಯ ಊರಿಯಲ್ಲೇ ಕಬ್ಬಿಣ ಬೇಯಿಸಿ ಬಾಗಿಸಿ ರೈತಾಪಿ ಕಾಯಕಕ್ಕೆ ನೆರವಾಗುವ ಕೃಷಿ ಪರಿಕರಗಳನ್ನು ತಯಾರಿ ಮಾಡಿಕೊಡುತ್ತ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.
ಮೂಲತಃ ಹುಬ್ಬಳ್ಳಿ ನಿವಾಸಿಗಳಾದ ಇರುವ ಸದ್ಯ ಕುಂದಗೋಳ ಪಟ್ಟಣದ ಕುರಬಗೇರಿಯ ಆಲದಮರದ ನೆರಳಡಿ ತಮ್ಮ ಕಾಯಕ ಆರಂಭಿಸಿ ಕೃಷಿ ಕೆಲಸಕ್ಕೆ ಬೇಕಾದ ಕುಡುಗೋಲು, ಕುರ್ಚಿಗೆ, ಕಂದಿಲು, ಗುದ್ದಲಿ, ತಯಾರಿಸಿ ಕೊಡುತ್ತಿದ್ದಾರೆ.
ಈ ಕಾಯಕದಲ್ಲಿ ಒಂದು ಕುಟುಂಬವೇ ಸಂಪೂರ್ಣ ಭಾಗಿಯಾಗಿ ಆಶ್ರಯಕ್ಕೆ ಸೂರು, ನೆರಳು ಮರೆತು ಉರಿ ಬಿಸಿಲನ್ನು ಶಪಿಸದೇ ಬೆಂಕಿಯಲ್ಲಿ ಕಬ್ಬಿಣ ಬೇಯಿಸಿ ಬಡಿದು ತುತ್ತು ಸಂಪಾದಿಸುವ ಕಾರ್ಮಿಕರ ಮಾರ್ಗ ನಿಜಕ್ಕೂ ಪ್ರೇರಣಾದಾಯಕ.
Kshetra Samachara
04/05/2022 02:50 pm