ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಚ್ಛತೆಗೆ ಟ್ರ್ಯಾಕ್ಟರ್ ವ್ಯವಸ್ಥೆ : ವಿನೂತನ ಕ್ಲೀನಿಂಗ್

ಹುಬ್ಬಳ್ಳಿ: ದಸರಾ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ವರ್ಲ್ಡ್ ಸ್ವ್ಕೇರ್ ಫೌಂಡೇಶನ್ ಹಾಗೂ ಎಸ್ ಎಸ್ ಕೆ ಸಮಾಜ ವತಿಯಿಂದ, ಘಟವಿಸರ್ಜನೆಗೆ ಒಂದು ವಿಶೇಷವಾದ ವ್ಯವಸ್ಥೆಯನ್ನು ಮಾಡುವ ಮೂಲಕ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.

ನವರಾತ್ರಿ ಅಂಗವಾಗಿ ನವದುರ್ಗೆಯ ಅವತಾರಗಳನ್ನು ಪೂಜಿಸುವ ಉದ್ದೇಶದಿಂದ, ಮೊದಲ ದಿನವೇ ಘಟಸ್ಥಾಪನೆ ಮಾಡಲಾಗುತ್ತದೆ. ಇಂತಹ ಪವಿತ್ರವಾದ ಘಟಗಳನ್ನು ಕೆರೆ, ಹಳ್ಳ,ಬಾವಿ, ನದಿಗಳಲ್ಲಿ ವಿಸರ್ಜನೆ ಮಾಡುತ್ತಾರೆ.ಇದರಿಂದ ಕೆರೆ, ಬಾವಿ ಮಲೀನವಾಗುವಂತಾಗುತ್ತಿತ್ತು, ಇದನ್ನು ಮನಗಂಡ ವರ್ಲ್ಡ್ ಸ್ವ್ಕೇರ್ ಫೌಂಡೇಶನ್, ಹಾಗೂ ಎಸ್ ಎಸ್ ಕೆ ಸಮಾಜ ಚಿಂತನ ಮಂಥನ ಸಮಿತಿ, ಅವಳಿನಗರದಲ್ಲಿ ಘಟವಿಸರ್ಜನೆಗಾಗಿಯೇ ಸುಮಾರು 8 ಟ್ರ್ಯಾಕ್ಟರ್ ಗಳನ್ನು ಬಿಟ್ಟು ಘಟ ಸಂಗ್ರಹಿಸಿ, ಊರಾಚೆ ಹಾಕುವ ಕೆಲಸ ಮಾಡಿದೆ.

ಈ ಕೆಲಸಕ್ಕೆ ಹುಬ್ಬಳ್ಳಿ ಧಾರವಾಡ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ವಿಶೇಷವಾಗಿ ಸಮಾಜ ಸೇವೆ ಮಾಡುವ ಗುರಿ ಹೊಂದಿರುವ ಇವರ ಕಾರ್ಯ, ಹೀಗೆ ಸಾಗಲಿ ಎನ್ನುವುದೇ ಎಲ್ಲರ ಆಶಯ!

Edited By : Manjunath H D
Kshetra Samachara

Kshetra Samachara

18/10/2021 07:48 pm

Cinque Terre

36.4 K

Cinque Terre

1

ಸಂಬಂಧಿತ ಸುದ್ದಿ