ಕುಂದಗೋಳ : ಬಯಲು ಹೋಗಿ ಬಾರ್ ಆಯ್ತು ನ್ಯಾಂಟಿ ಹೊಡಿ ಮನಿಗೆ ನಡಿ

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ

ಕುಂದಗೋಳ : ರಾಜ್ಯದೆಲ್ಲೇಡೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹತೋಟಿ ಈ ನಮ್ಮ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿ ಬಾರ್ ಕ್ಲೋಸ್ ಮಾಡದೆ ಪಾರ್ಸಲ್'ಗೆ ಅವಕಾಶ ಕೊಟ್ಟಿದ್ದ ಎಲ್ಲರಿಗೂ ಗೊತ್ತಿರುವ ಸಂಗತಿ.

ಆದ್ರ, ಈ ಕುಂದಗೋಳದಾಗ ಸರ್ಕಾರ ಹಿಂಗ್ ಮದ್ಯ ಪಾರ್ಸಲ್'ಗೆ ಅವಕಾಶ ಕೊಟ್ಟಿದ್ದಕ್ಕ ದೊಡ್ಡ ಸಮಸ್ಯೆ ಎದುರಾಗಿತಿ ನೋಡ್ರಿ ಪಾ. ಏನ್ರೀ ಸಮಸ್ಯೆ ಅಂತಿರೇನು ?

ಅಲ್ರೀ ಕಳೆದ ವರ್ಷ ಲಾಕ್ ಡೌನ್ ಅವಧಿ ಒಳಗೆ ಈ ಸಾರಾಯಿ ಇಲ್ಲದ ಕುಡುಕರ ಪರದಾಟ ನೋಡಿ. ಈ ಸಾರಿ ಸರ್ಕಾರ ಪಾರ್ಸೇಲ್'ಗೆ ಅವಕಾಶ ಕೋಟ್ರ ಈ ಪಾನ ಪ್ರೀಯರು ಅದನ್ನೇ ದುರುಪಯೋಗ ಪಡಿಸಿಕೊಂಡು ಬಯಲನ್ನೇ ಬಾರ್ ಮಾಡಿ ಬಿಟ್ಟಾರ.

ಹೌದು ! ಇಲ್ನೋಡ್ರಿ ಕುಂದಗೋಳದಿಂದ್ ಬೆಟದೂರು ಸಂಪರ್ಕ ಕಲ್ಪಿಸುವ ರಸ್ತೆದಾಗ, ಚರಂಡ್ಯಾಗ ಹೊಲದಾಗ ಕ್ವಿಂಟಾಲ್ ಗಟ್ಟಲೇ ಸಾರಾಯಿ ಪಾಕೆಟ್, ಬಾಟಲಿ, ಗುಟ್ಕಾ, ಸಿಗರೇಟ್, ವಾಟರ್ ಬಾಟಲಿ, ಚಿಪ್ಸ್ ಒಗದಿದ್ದ ಅಲ್ಲದ ಗ್ಲಾಸ್ ಬಾಟಲಿ ಹೊಲದಾಗ ಒಡೆದ ಹೋಗ್ಯಾರ ನೀವ್ ಹೇಳ್ರಿ ಇದೆಷ್ಟರಮಟ್ಟಿಗೆ ಸರಿ‌.

ಇನ್ನೂ ಈ ರೈತರು ಹೊಲದಾಗ ರೋಡಿನ್ಯಾಗ ಬಿದ್ದ ಗ್ಲಾಸ್ ತುಳಿದು ಅಪಾಯಕ್ಕೆ ತುತ್ತಾಗೋದು ಅಲ್ಲದೆ ಸ್ವತಃ ತಾವೇ ಈ ತರಾ ಸಾರಾಯಿ ಬಾಟಲಿ ಆರಿಸಿ ಒಂದೇಡೆ ಹಾಕ ಕತ್ತಾರ.

ಈ ನಮೂನಿ ಹೊಲದಾಗ ಬಾಟಲಿ ಕುಡುಕರು ಬಾಟಲಿ ಹಾಕಿದ್ದಕ್ಕ ನಿತ್ಯ ಕೃಷಿ ಮಾಡಾಕ ಹೊಲಕ್ಕೆ ಹೋಗೋ ರೈತಾಪಿ ಜನರಿಗೆ ಜಾನುವಾರುಗಳಿಗೆ ಎಲ್ಲಿಲ್ಲದ ತಾಪತ್ರಯ ಉಂಟಾದ್ರ ಈ ಮಹಿಳೆಯರು ಒಬ್ರ ಹೊಲಕ್ಕೆ ಹೋಗಾಕ ವಲ್ಯಾ ಅಂತಾರ ಅದೇನು ಪರಿಸ್ಥಿತಿ ಅಂತ್ಹೇಳಿ ಆ ರೈತರೇ ಹೇಳ್ತಾರೆ ಕೇಳ್ರಿ.

ಕೇಳಿದ್ರಲ್ಲಾ ಈ ಮೊದಲಿನಿಂದಲೂ ಈ ರಸ್ತೆ ಹೊಲಗಳಲ್ಲಿ ಅಲ್ಲೋಬ್ರೂ ಇಲ್ಲೋಬ್ರೂ ಸಾರಾಯಿ ಕುಡುಕರು ಕಂಡು ಬರತಿದ್ರ ಈಗ ಲಾಕ್ ಡೌನ್ ಜಾರಿಯಾಗಿ ಪಾರ್ಸೆಲ್ ಬಾರ್'ನ್ಯಾಗ ಪಾರ್ಸಲ್ ಸೇವೆ ಚಾಲೂ ಆತ್ ಅವಾಗಿಂದ್ ನೋಡ್ರಿ ಬಯಲು ಹೋಗಿ ಬಾರ್ ಆಗೇತಿ.

ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೊಲೀಸರು ಕ್ರಮ ಕೈಗೊಳ್ಳಿ.

Kshetra Samachara

Kshetra Samachara

6 days ago

Cinque Terre

56.79 K

Cinque Terre

4

 • Shivanand GK Shivu
  Shivanand GK Shivu

  ಕೂಡಕ್ರ ಎಣ್ಣಿ ಹೊಡಿಬೇಕದ್ರ ವಿಡಿಯೋ ಮಾಡಿ ಬಿಡ್ರೀ..

 • Praveen Jamkhandi
  Praveen Jamkhandi

  ಪೂಜಾರ.ಸರ್.ಇವರಿಗೆಲ್ಲ.ಹುಚ್ಚ.ನಾಯಿ.ಥರಹ.ಹೊಡಿ.ಬೆಕು?

 • pakka hindustani
  pakka hindustani

  shame on our govt..

 • Ratan
  Ratan

  ಭಾರತೀಯ ರಿಗೆ ಸ್ವಚ್ಛತೆಯ ಅರಿವು kadime