ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂತೂ ಇಂತೂ ದಶಕದ ಹೋರಾಟಕ್ಕೆ ಸಿಕ್ಕಿತು ಜಯ: ಸಿದ್ಧಾರೂಡ ಹಾಗೂ ಹೆಗ್ಗೇರಿ ಜನರು ನಿರಾಳ

ಹುಬ್ಬಳ್ಳಿ: ಅದು ಹು-ಧಾ ಮಹಾನಗರದ ಪ್ರತಿಷ್ಠಿತ ಸಿದ್ಧಾರೂಡರ ಹೆಸರಿಟ್ಟುಕೊಂಡಿರುವ ನಗರ. ಈ ನಗರದ ಜನತೆಯ ನೂರಾರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ದಿನನಿತ್ಯವೂ ಒಂದಿಲ್ಲೊಂದು ಭಯದಲ್ಲಿ ಬದುಕಿದ್ದ ಜನರ ಕಷ್ಟಗಳು ದೂರವಾಗಿದೆ.ಹಾಗಿದ್ದರೇ ಇಲ್ಲಿನ ಜನರಿಗೆ ಸಮಸ್ಯೆ ಆಗಿದ್ದಾದರೂ ಏನು ಈಗ ಪರಿಹಾರ ಸಿಕ್ಕಿರುವುದಾದರೂ ಎನು ಅಂತೀರಾ ಈ ಸ್ಟೋರಿ ನೋಡಿ...

ವಾ.ಓ: ವಾಣಿಜ್ಯನಗರಿ ಹುಬ್ಬಳ್ಳಿಯ ಹೆಗ್ಗೇರಿ ಹಾಗೂ ಸಿದ್ಧಾರೂಡನಗರ ಜನರಿಗೆ ಹು-ಧಾ ಮಹಾನಗರ ಪಾಲಿಕೆಯ ಒಡೆತನದ ಕೃಷ್ಣಾಪುರ ಸರ್ವೆ ನಂ.130 ಸಿಟಿ ಸರ್ವೆ ನಂ.15/ಎ ರಲ್ಲಿ ಪಲಾನುಭವಿಗಳಿಗೆ ಪಾಲಿಕೆಯಿಂದ ಹಂಚಿಕೆ ಮಾಡಲಾದ ನಿವೇಶನವನ್ನು ಮಂಜೂರು ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು,1981ನೇ ಸಾಲಿನಲ್ಲಿ ಸ್ವಾಧೀನ ಪತ್ರ ನೀಡಿರುವ 207 ಪಲಾನುಭವಿಗಳಲ್ಲಿ ಮಹಾನಗರ ಪಾಲಿಕೆ ನಿಗದಿ ಪಡಿಸಿದ ಮೊತ್ತವನ್ನು 166 ಪಲಾನುಭವಿಗಳಿಗೆ ನಿವೇಶನ ಮಂಜೂರಾತಿ ಮಾಡಲು ನಿರ್ದೇಶನ ನೀಡಿರುವುದು ಹಲವಾರು ದಶಕದ ಹೋರಾಟಕ್ಕೆ ಜಯಸಿಕ್ಕಿದೆ.

ಇನ್ನೂ ಉಳಿದ 41 ಪಲಾನುಭವಿಗಳು ಪಾವತಿಸಬೇಕಾದ ಬಾಕಿ ಇರುವ ಮೊತ್ತಕ್ಕೆ ನಿವೇಶನ ಹಂಚಿಕೆಯಾದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ 8ರಷ್ಟು ಸರಳ ಬಡ್ಡಿಯೊಂದಿಗೆ ಒಟ್ಟು ಮೊತ್ತವನ್ನು ಮಹಾನಗರ ಪಾಲಿಕೆಗೆ ಪಾವತಿಸಿಕೊಂಡು ನಿವೇಶನ ನೋಂದಣಿ ಮಾಡಿಕೊಡಲು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976ರ ಕಲಂ 176(6) ಅನ್ವಯ ಸರ್ಕಾರದ ಘಟನೋತ್ತರ ಮಂಜೂರಾತಿ ನೀಡಿದ್ದು,ಹೆಗ್ಗೇರಿ ಹಾಗೂ ಸಿದ್ಧಾರೂಡನಗರದ ಜನರು ನಿಟ್ಟುಸಿರು ಬಿಡುವಂತಾಗಿದ್ದು, ಹೋರಾಟದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವ ವಹಿಸಿದ್ದು,ಸುಮಾರು ದಶಕದ ನಿವೇಶನಗಳ ಹೋರಾಟಕ್ಕೆ ಜಯಸಿಕ್ಕಿದ್ದು,ಸಾರ್ವಜನಿಕರು ಬಸವರಾಜ ಹೊರಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ನಿವೇಶನದ ಕುರಿತು ಸಿದ್ಧಾರೂಡ ನಗರ ಹಾಗೂ ಹೆಗ್ಗೇರಿ ನಿವಾಸಿಗಳು ಮಹಾನಗರ ಪಾಲಿಕೆಗೆ ಅಲೆದಾಡಿ ಹೈರಾಣಾಗಿದ್ದು,ಸಾಕಷ್ಟು ಮನವಿಯನ್ನು ನೀಡಿ ಅಳಲನ್ನು ತೋಡಿಕೊಂಡಿದ್ದು,ಅಂತೂ ಇಂತೂ ಸಿದ್ಧಾರೂಡರ ಆಶೀರ್ವಾದದಿಂದ ಸಿದ್ಧಾರೂಡನಗರ ಹಾಗೂ ಹೆಗ್ಗೇರಿ ನಗರದ ಪಲಾನುಭವಿಗಳ ನಿವೇಶನದ ಕನಸು ನನಸಾಗಿದೆ.

Edited By : Manjunath H D
Kshetra Samachara

Kshetra Samachara

27/01/2021 06:14 pm

Cinque Terre

50.1 K

Cinque Terre

3

ಸಂಬಂಧಿತ ಸುದ್ದಿ