ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹದಗೆಟ್ಟ ರಸ್ತೆ ದುರಸ್ತಿಗೆ ಅಧಿಕಾರಿಗಳ ನಿರ್ಲಕ್ಷ್ಯ; ಗ್ರಾಮಸ್ಥರಿಗೆ ಸಂಚಾರ ಹರಸಾಹಸ

ನವಲಗುಂದ: ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿನ ದುಸ್ಥಿತಿ ಇದು. ಇಂತಹ ರಸ್ತೆಯಲ್ಲೇ ಓಡಾಡುತ್ತಾ ಸ್ಥಳೀಯರು ದಿನನಿತ್ಯ ಜೀವನ ಸಾಗಿಸುವ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಸಂಕಷ್ಟದಲ್ಲಿ ಸಾರ್ವಜನಿಕರು ಪರದಾಟ ನಡೆಸಿದರೂ ಯಾವೊಬ್ಬ ಅಧಿಕಾರಿ ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪ ಸ್ಥಳೀಯರದ್ದು.

ಹೌದು... ತಾಲೂಕಿನ ಅಳಗವಾಡಿ ಗ್ರಾಮದ ಗೊಬ್ಬರಗುಂಪಿ ಪ್ಲಾಟ್ ಎಂದು ಕರೆಯಲಾಗುವ ಈ ಓಣಿಯ ರಸ್ತೆ ಈಗ ಸ್ಥಳೀಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೆಸರು ಗದ್ದೆಯಂತಾದ ಈ ರಸ್ತೆಯಲ್ಲಿ ಗ್ರಾಮಸ್ಥರು ಸುಮಾರು 15 ವರ್ಷಗಳಿಂದ ಭಾರೀ ಕಷ್ಟಪಟ್ಟು ಸಂಚರಿಸುತ್ತಿದ್ದಾರೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಡಬೇಕು ಅಂದ್ರೆ ಹರಸಾಹಸವೇ ಪಡಬೇಕಾಗಿದೆ.

ರಸ್ತೆಯಲ್ಲಿ ಸಂಚರಿಸಲು ಮಕ್ಕಳು, ವೃದ್ಧರು, ಗರ್ಭಿಣಿಯರು, ರೋಗಿಗಳು ದಿನನಿತ್ಯ ಪರದಾಟ ನಡೆಸುವಂತಹ ಪರಿಸ್ಥಿತಿ ಬಂದಿದೆ. ಇನ್ನು ವಿಷಜಂತುಗಳ ಓಡಾಟವೂ ಇಲ್ಲಿ ಹೆಚ್ಚಾಗಿದೆ. ಈ ಓಣಿಯಲ್ಲಿ ಯಾವುದಾದರೂ ಸಾವು ಸಂಭವಿಸಿದರೆ, ಶವವನ್ನು ಚಕ್ಕಡಿ ಅಥವಾ ಟ್ಯಾಕ್ಟರ್ ಮೂಲಕವೇ ಸಾಗಿಸಬೇಕಾಗಿದೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿ, ಇಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Somashekar
Kshetra Samachara

Kshetra Samachara

08/07/2022 02:29 pm

Cinque Terre

46.86 K

Cinque Terre

4

ಸಂಬಂಧಿತ ಸುದ್ದಿ