ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳಿಗರೇ ನಿಮ್ಮೂರಿನ ಬಾವಿಯ ಅಭಿವೃದ್ಧಿಗೆ ನೀವೆ ಮುಂದಾಗಿ !

ಕುಂದಗೋಳ : ಈ ಹಿರಿಯರು ಜಗತ್ತಿಗೆ ನೀಡಿದ ಪುರಾತನ ಕುರುಹುಗಳಲ್ಲಿ ಈ ಬಾವಿಗಳು ಸಹ ಒಳಗೊಂಡಿವೆ. ಇಂತಹ ಇತಿಹಾಸ ಪ್ರಸಿದ್ಧ ಬಾವಿಯೊಂದು ಇಂದು ಕುಂದಗೋಳ ಪಟ್ಟಣದ ಶಿವಾಜಿನಗರದಲ್ಲಿ ಅಳಿವಿನ ಅಂಚಿಗೆ ಜಾರಿದ್ದು, ಬಾವಿ ಎಂದು ಗುರುತಿಸಿದ ಮಟ್ಟಿಗೆ ನೈಜತೆ ಕಳೆದುಕೊಂಡಿದೆ.

ಈ ಹಿಂದೆ ಸರಿಯಾದ ಸಮಯಕ್ಕೆ ಮಳೆ ಸುರಿಯದಿದ್ದಾಗ ಈ ಕುಂದಗೋಳದ ಜನರು ಈ ಬಾವಿ ನೀರನ್ನು ತೆಗೆದುಕೊಂಡು ಪಕ್ಕದಲ್ಲಿರುವ ಹರಿಹರೇಶ್ವರನಿಗೆ ಸುರಿದ ಬಳಿಕ ಎಂದೂ ಬಾರದ ಮಳೆ ಬಿಟ್ಟು ಬಿಡದೆ ಸುರಿಯುತ್ತಂತೆ. ಈ ಬಾವಿ ನೀರು ಹರಿಹರಶ್ವೇರನ ಈ ಪವಾಡ ಇತ್ತಿಚಿನ ದಿನದಲ್ಲಿ ಮರೆಯಾಗಿ, ಈ ಹಿಂದೆ ಕುಡಿಯುವ ನೀರಿನ ಮೂಲವಾಗಿದ್ದ ಬಾವಿಯೂ ಇಂದು ಅವಸಾನದ ಅಂಚು ತಲುಪಿದೆ.

ಸಾರ್ವಜನಿಕರು ಹಾಗೂ ಮಕ್ಕಳ ರಕ್ಷಣೆಗಾಗಿ ಬಾವಿಗೆ ಹೋಗುವ ದಾರಿ ಕ್ಲೋಸ್ ಮಾಡಲಾಗಿದ್ದು, ಬಾವಿಯ ಸುತ್ತ ಕಸ ಬೆಳೆದಿದೆ. ಇದಲ್ಲದೆ ಬಾವಿನ ಒಳಗಿಳಿವ ಮೆಟ್ಟಿಲುಗಳು ಸಹ ಹಾಳಾಗಿ ಬಾವಿಯ ಸುತ್ತಲಿನ ಜಾಗದಲ್ಲಿ ಅನಾವಶ್ಯಕ ವಸ್ತುಗಳನ್ನು ಎಸೆಯಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕಿದೆ.

Edited By : Manjunath H D
Kshetra Samachara

Kshetra Samachara

20/11/2020 07:15 pm

Cinque Terre

37.82 K

Cinque Terre

0

ಸಂಬಂಧಿತ ಸುದ್ದಿ