ಕುಂದಗೋಳ : ಕೊರೊನಾ ಕರಾಳ ದಿನಗಳನ್ನು ಕಳೆದು ಶಾಲಾ ಕಾಲೇಜುಗಳು ಆರಂಭವಾಗಿದ್ದರೇ, ಈ ಶಾಲಾ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗಾಗಿ ಹಾಸ್ಟೇಲ್ ಸಹ ಸಜ್ಜಾಗಿವೆ.
ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಹಾಸ್ಟೆಲ್ ಕೋಣೆಗಳನ್ನ ಸಂಪೂರ್ಣ ಸ್ಯಾನಿಟೈಜರ್ ಮಾಡಲಾಗಿದ್ದು, ಕಡ್ಡಾಯ ಮಾಸ್ಕ್ ಬಳಕೆ ಜೊತೆ ಸ್ವಚ್ಚತೆಗೆ ಎಲ್ಲಿಲ್ಲದ ಪ್ರಾಶಸ್ತ್ಯ ನೀಡಲಾಗಿದೆ. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಐದು ಹಾಸ್ಟೇಲ್ ಗಳ ಮಕ್ಕಳಿಗೆ ಇಲಾಖೆಯ ಕಲ್ಯಾಣಾಧಿಕಾರಿಗಳು ಪ್ರತಿಯೊಬ್ಬ ಮಕ್ಕಳಿಗೂ ಕರೆ ಮಾಡಿ ಶಾಲಾ ಕಾಲೇಜು ಆರಂಭವಾಗಿವೆ, ಕೋವಿಡ್ ಭೀತಿ ಇಲ್ಲಾ ಬನ್ನಿ ಎಂದ್ರೂ ಇಂದಿಗೂ ಒಬ್ಬ ವಿದ್ಯಾರ್ಥಿಯೂ ಬಂದಿಲ್ಲ. ಈ ಬಗ್ಗೆ ಅವರ ಮಾತೇನು ಕೇಳಿ.
ಇನ್ನೊಂದು ವಿಚಾರ ಎನಂದ್ರೇ ಈ ಮೊದಲು ಹಾಸ್ಟೆಲ್ ಒಂದು ಕೊಠಡಿಯಲ್ಲಿ 3 ರಿಂದ 4 ಜನ ವಿದ್ಯಾರ್ಥಿಗಳು ಇರೋದು ಸಾಮಾನ್ಯ. ಆದ್ರೇ ಈ ಸಾರಿ ಕೊರೊನಾ ಕಾರಣ ಯುಜಿಸಿ ಒಂದು ಕೊಠಡಿಗೆ ಒಬ್ಬ ವಿದ್ಯಾರ್ಥಿಯನ್ನ ಮಾತ್ರ ಸೂಚಿಸಿದ್ರೇ, ಈ ಸಮಾಜ ಕಲ್ಯಾಣ ಇಲಾಖೆ ಶೇ.50 ರಷ್ಟು ಮಕ್ಕಳಿರಲು ಅಸ್ತು ಎಂದಿದೆ.
ಇನ್ನು ಈ ಕುಂದಗೋಳ ಪಟ್ಟಣದ ಸುಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವಸತಿ ಶಾಲೆಯ ಶೌಚಾಗೃಹಗಳು ಹಾಳಾಗಿದ್ದು, ಶಾಲಾ ಆರಂಭದ ಮುನ್ಸೂಚನೆ ಇದ್ರೂ ಸ್ವಚ್ಚತೆ ಮಾಡಿಲ್ಲ. ಮುಖ್ಯವಾಗಿ ವಿಧ್ಯಾರ್ಥಿನಿಯರ ಶೌಚಾಲಯದ ಬಾಗಿಲುಗಳೇ ಮುರಿದಿದೆ.
ಇನ್ನು ಮೇಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಸಹ ಮಕ್ಕಳ ಆಗಮನಕ್ಕೆ ಸಜ್ಜಾಗಿದ್ದು, ಸುಚಿತ್ವದ ಜೊತೆ ಕೊರೊನಾ ಕಾಳಜಿಯನ್ನು ವಹಿಸುತ್ತಿವೆ. ಹಾಗೇ ಅಲ್ಪ ಸಂಖ್ಯಾತರ ಮೇಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೇಲ್ ಸಹ ಸುವ್ಯವಸ್ಥೆ ಹೊಂದಿವೆ.
Kshetra Samachara
20/11/2020 06:46 pm