ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಲ್ಕು ತಿಂಗಳು ಕಳೆದರೂ ನಾಮಕರಣಗೊಂಡಿಲ್ಲ: ನನೆಗುದಿಗೆ ಬಿದ್ದಿದೆ‌ ರೈಲ್ವೆ ಇಲಾಖೆಯ ಕಾರ್ಯ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಅಂದರೆ ಸಿದ್ದಾರೂಢ, ಸಿದ್ದಾರೂಢರೆಂದ್ರೆ ಹುಬ್ಬಳ್ಳಿ ಅನ್ನೋ ಮಾತಿದೆ..ಅಂತಹ ಸಿದ್ದಾರೂಢರ ಹೆಸರನ್ನು ವಿಶ್ವದಾದ್ಯಂತ ಪಸರಿಸಬೇಕು ಅನ್ನೋ ನಿಟ್ಟಿನಲ್ಲಿ ಭಕ್ತ ಗಣ ಹಲವಾರು ವರ್ಷಗಳಿಂದ ಇದೊಂದು ಬೇಡಿಕೆಯನ್ನು ಈಡೇರಿಸಿ ಅಂತ ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿತ್ತು..ಆದರೆ ಸರ್ಕಾರ ಕೂಡ ಇವರ ಬೇಡಿಕೆಗೆ ಅಸ್ತು ಎಂದಿದ್ದರೂ ಸಹ ಕಾರ್ಯ ಮಾತ್ರ ಅಲ್ಲಿಗೆ ನಿಂತಿದೆ..ಏನದು ಬೇಡಿಕೆ ಅಂತೀರಾ‌ ಇಲ್ಲಿದೆ ನೋಡಿ ಸ್ಟೋರಿ..

ಹೂಬಳ್ಳಿಯ ನಿಜ ದೈವ ಅಂತಲೇ ಕರೆಸಿಕೊಳ್ಳುವ ಶ್ರೀ ಸಿದ್ದಾರೂಢ ಸ್ವಾಮೀಜಿಗಳು ಹುಬ್ಬಳ್ಳಿ ಜನರ ಪಾಲಿಗೆ ಬ್ರಹ್ಮ ಸ್ವರೂಪಿ. ಹುಬ್ಬಳ್ಳಿಯಲ್ಲಿ ನೆಲೆಸಿ ಇಲ್ಲೇ ಬ್ರಹ್ಮಐಕ್ಯ ಆಗಿರುವ ಶ್ರೀಗಳು ಬದುಕಿನುದ್ದಕ್ಕೂ ಭಕ್ತರ ಆಶೋತ್ತರಗಳಿಗೆ ಸ್ಪಂದಿಸಿ ಅವರ ಇಷ್ಟಾರ್ಥಗಳನ್ನು ಪೂರೈಸಿದವರು.ಅಂತಹ ಮಹಾನ್ ದೈವ ಗುಣ ಹೊಂದಿರುವ ಶ್ರೀಗಳ ಹೆಸರು ಮತ್ತಷ್ಟು ಪ್ರಜ್ವಲಿಸಲಿ ಅನ್ನೋ ನಿಟ್ಟಿನಲ್ಲಿ ಎಲ್ಲಾ ರಾಜಕಾರಣಿಗಳು ಹುಬ್ಬಳ್ಳಿ ನೈರುತ್ಯ ರೈಲು ನಿಲ್ದಾಣಕ್ಕೆ ಸಿದ್ದಾರೂಢ ಸ್ವಾಮೀಜಿ ಹೆಸರು ನಾಮಕರಣ ಮಾಡಬೇಕು ಅಂತ ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು..ಆ ಬೇಡಿಕೆಯಂತೆ ಕಳೆದ ಜುಲೈ 7 ರಂದು ಕೇಂದ್ರ ಸಚಿವಾಲಯದಿಂದ ನಾಮಕರಣಕ್ಕೆ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ..

ಆದರೆ ಅಲ್ಲಿಂದ ಇಲ್ಲಿಯವರೆಗೆ ಅದ್ಯಾಕೋ ಅಧಿಕಾರಿಗಳು ಹೆಸರು ಇಡೋಕೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಸಚಿವ ದಿವಂಗತ ಸುರೇಶ್ ಅಂಗಡಿ ಸಹ ಸಿದ್ದಾರೂಢರ ಪರಮ ಭಕ್ತರಾದ ಹಿನ್ನೆಲೆ ಅವರೇ ಮುತುವರ್ಜಿ ವಹಿಸಿ ಹೆಸರು ತರಲು ಶ್ರಮವಹಿಸಿದ್ದರು ಆದರೆ ಅವರ ನಿಧನದ ಬಳಿಕ ಅದ್ಯಾಕೋ ಅಧಿಕಾರಿಗಳು ಮಾತ್ರ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಅಲ್ಲದೆ ರೈಲು ನಿಲ್ದಾಣದಲ್ಲೇ ಸಿದ್ದಾರೂಢರ ಪ್ರತಿಮೆ ಸಹ ಪ್ರತಿಸ್ಥಾಪನೆ ಮಾಡುವ ಪ್ಲಾನ್ ಸಹ ಮಾಡಿದ್ದು ಒಟ್ಟಿಗೆ ಎರಡನ್ನು ಇಡಬೇಕು ಅನ್ನೋದೇ ಸದ್ಯ ಭಕ್ತರ ಅಗ್ರಹವಾಗಿದೆ..

ಒಟ್ಟಾರೆ ಸಿದ್ದಾರೂಢರ ಮಠದ ಪರಂಪರೆಯ ವಿಶ್ವವ್ಯಾಪಿಯಾಗಿದ್ದು,ಹುಬ್ಬಳ್ಳಿಯ ನೈರುತ್ಯ ರೈಲು ನಿಲ್ದಾಣಕ್ಕೂ ಆದಷ್ಟು ಬೇಗ ಅವರ ಹೆಸರು ನಾಮಕರಣವಾಗಲಿ ಅರ್ಧಕ್ಕೆ ನಿಂತಿರುವ ಈ ಹೆಸರನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಲಿ ಅನ್ನೋದೇ ಭಕ್ತರ ಬೇಡಿಕೆಯಾಗಿದೆ..

Edited By : Manjunath H D
Kshetra Samachara

Kshetra Samachara

18/11/2020 09:31 pm

Cinque Terre

49.98 K

Cinque Terre

7

ಸಂಬಂಧಿತ ಸುದ್ದಿ