ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಗುಪ್ತಗಾಮಿನಿ ಶಾಲ್ಮಲಾ ನದಿ ಅನಾಥ: ಧಾರವಾಡದಲ್ಲಿ ಆಗಬೇಕಿದೆ ಪ್ರವಾಸಿ ತಾಣ...

ಧಾರವಾಡ : ಧಾರವಾಡ ಅಂದ್ರೆ ಸಾಹಿತಿಗಳ ತವರೂರು,ವಿದ್ಯಾಕಾಶಿ,ಶಿಕ್ಷಣಕಾಶಿ ಹೀಗೆ ಹತ್ತು ಹಲವಾರು ವಿಶಿಷ್ಟವಾಗಿ ಕರೆಸುವಕೊಳ್ಳುವ ನಮ್ಮ ಧಾರವಾಡ ಜಿಲ್ಲೆಯಲ್ಲಿ ಒಂದು ಪ್ರಸಿದ್ಧವಾದ ಐತಿಹ್ಯ ಸ್ಥಳವಿದೆ.ಅದುವೇ ಸೋಮೇಶ್ವರ ಕುಂಡ ಇದನ್ನು ಶಾಲ್ಮಲಾ ನಂದಿ ಎಂದು ಕರೆಯುತ್ತಾರೆ.

ಇತಿಹಾಸದ ಪರಂಪರೆಯ ಅದ್ಭುತ ತಾಣವಾಗಿ ಶಾಲ್ಮಲೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆ. ಆದ್ರೆ ಇದೀಗ ಆ ನದಿಯ ಸ್ಥಿತಿ ಸೂಕ್ತ ನಿರ್ವಹಣೆ ಇಲ್ಲದೆ ಅಳಿವಿನ ಅಂಚಿಗೆ ತಲುಪಿದ್ದು ಯಾವ ರೀತಿಯ ಸ್ಥಿತಿಯಲ್ಲಿದೆ ಅನ್ನೋದಕ್ಕೆ ಈ ದೃಶ್ಯಗಳೇ ಸಾಕ್ಷಿ.

ಗುಡ್ಡ ಗಾಡಿನ ಮದ್ಯ ಅಲ್ಲಲಿ ಕಾಣುವ ಮನೆಗಳು ಒಂದೆಡೆ ಕಲುಷಿತವಾಗಿ ಹರಿಯುತ್ತಿರುವ ಶಾಲ್ಮಲೆ ಹೀಗೆ ಕಾಣುವ ಈ ಹೊಂಡ ಅಂತಿಂಥ ಹೊಂಡವಲ್ಲ. ಈ ನೀರು ಸಾಮಾನ್ಯವಾದ ನೀರಲ್ಲ. ಧಾರವಾಡದಲ್ಲೇ ಹುಟ್ಟಿ ಹಲವು ಜಿಲ್ಲೆಗಳಿಗೆ ನೀರೆರೆಯುವ ಪುಣ್ಯ ಸ್ಥಳ ಎನಿಸಿಕೊಂಡಿರುವ ಶಾಲ್ಮಲಾ ನದಿಯ ಉಗಮ ಸ್ಥಾನವಿದು.

ಎಲ್ಲೆಲ್ಲೂ ಕಲ್ಮಷಿತ ತುಂಬಿರುವ ಈ ಹೊಂಡ, ಪಕ್ಕದಲ್ಲೇ ಹರಿಯುವ ಚರಂಡಿ ನೀರು,ಐತಿಹ್ಯ ಹೊಂದಿರೋ ಈ ನದಿಯ ಉಗಮ ಸ್ಥಳ ಇದೀಗ ಗಬ್ಬು ನಾರುವ ಸ್ಥತಿ ತಲುಪಿದೆ.

ಆದಷ್ಟು ಬೇಗ ಸರ್ಕಾರ ಶಾಲ್ಮಲೆಗೆ ಸುಂದರ ಸುಸಜ್ಜಿತ ವ್ಯವಸ್ಥೆಯನ್ನ ಕಲ್ಪಿಸಿ ಇದನ್ನ ಪ್ರವಾಸಿ ತಾಣವನ್ನಾಗಿ ಬದಲಾಯಿಸಬೇಕೆಂದು ಪ್ರವಾಸಿಗರ ಹಾಗೂ ಭಕ್ತಬಳಗದ ಆಶಯವಾಗಿದೆ.

Edited By : Manjunath H D
Kshetra Samachara

Kshetra Samachara

03/11/2020 10:28 pm

Cinque Terre

28.29 K

Cinque Terre

2

ಸಂಬಂಧಿತ ಸುದ್ದಿ