ಹುಬ್ಬಳ್ಳಿ- ಗ್ಲಾಸ್‌ಹೌಸ್ ನಲ್ಲಿ ಸೆ.28 ರಂದು ನಗರದ ಗಿರಣಿಚಾಳದಲ್ಲಿ ಮಳೆ ನೀರಿನ ಕೊಯ್ಲಿನ ಹೊಂಡಕ್ಕೆ ಬಿದ್ದು, ಸಾವನ್ನಪ್ಪಿದ ಬಾಲಕಿ ಪ್ರಕರಣದ ಹಿನ್ನೆಲೆಯಲ್ಲಿ, ಘಟನೆ ನಡೆದು ಮೂರು ದಿನ ಕಳೆದರೂ ಬಾಲಕಿ ಕುಟುಂಬಕ್ಕೆ ಪರಿಹಾರ ಇನ್ನು ವರೆಗೂ ಸಿಕ್ಕಿಲ್ಲ ಎಂದು ಬಾಲಕಿ ಕುಟುಂಬದವರು ಸ್ಮಾರ್ಟ್ ಸಿಟಿ ಕಚೇರಿಯ ಎದುರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು..
ಬಾಲಕಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಇನ್ನುವರೆಗೂ ಯಾವುದೇ ಪರಿಹಾರ ಸಿಗದೆ ಕಾರಣ, ಬಾಲಕಿಯ ತಂದೆ ಪರುಶುರಾಮ ಯರಗಂಳಿಯ ಜೊತೆಗೆ ಸಮತಾಸೇನೆ ಸಂಘಟನೆ ಕೈ ಜೋಡಿಸಿ ಬಾಲಕಿ ಕುಟುಂಬಸ್ಥರ ಒಗ್ಗೂಡಿ ಪ್ರತಿಭಟನೆ ಮಾಡಿದರು....
Kshetra Samachara
01/10/2020 11:51 am