ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ರಸ್ತೆಯುದ್ದಕ್ಕೂ ಕಳ್ರೂ ಕಾಟ ತಗ್ಗು ಗುಂಡಿ ಸ್ವಾಮಿ ಹುಷಾರಾಗಿ ಮನೆಗೆ ಬನ್ನಿ ..!

ಹುಬ್ಬಳ್ಳಿ : ಜನರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ಕಾಮಗಾರಿಯೊಂದು ನಿರ್ಮಾಣ ಹಂತದಲ್ಲೇ ಜನರ ಜೀವಕ್ಕೆ ಮಾರಕವಾಗುತ್ತಿದ್ದು ಯಾವಾಗ ? ಏನು ? ಅನಾಹುತ ಸಂಭವಿಸುತ್ತೋ ? ಎಂದು ಜನ ಅಂಗೈಯಲ್ಲಿ ಜೀವ ಹಿಡಿದು ಈ ರಾಡಿ ತುಂಬಿದ ರಸ್ತೆಯಲ್ಲಿ ಸಾಗುತ್ತಿದ್ದಾರೆ.

ಹೌದು ! ಹುಬ್ಬಳ್ಳಿಯಿಂದ ಹಳ್ಯಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಪ್ರಗತಿಯಲ್ಲಿರುವ ರೇಲ್ವೇ ಬ್ರೀಡ್ಜ್ ಕಾಮಗಾರಿ ಕಾರಣ ಪಕ್ಕದಲ್ಲಿ ಜನ ಸಂಚಾರಕ್ಕೆ ನಿರ್ಮಿಸಿರುವ ರಸ್ತೆ ಹಾಳಾಗಿ ರಸ್ತೆಯುದ್ದಕ್ಕೂ ರಾಡಿ ತುಂಬಿ ತಗ್ಗುಗಳು ನಿರ್ಮಾಣವಾಗಿವೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಷ್ಟೇ ಅಲ್ಲಾ ರೈತಾಪಿ ಜನರಿಗೆ ಎಲ್ಲಿಲ್ಲದ ಕಷ್ಟ ಎದುರಾಗಿದ್ದು ನಿತ್ಯ ಹುಬ್ಬಳ್ಳಿಗೆ ಉದ್ಯೋಗ, ಶಾಲಾ-ಕಾಲೇಜು ಇತರ ಕೆಲಸಕ್ಕೆ ಹೋಗುವ ಅಲ್ಲಾಪುರ, ಕಡಪಟ್ಟಿ, ಹಳ್ಯಾಳ ಸೇರಿದಂತೆ ಕುಂದಗೋಳ ಜನರಿಗೆ ತೀವ್ರ ತೊಂದರೆ ಉಂಟಾಗಿದೆ.

ಇದಷ್ಟೇಲ್ಲದೆ ರೇಲ್ವೇ ಅಂಡರ್ ಬ್ರೀಡ್ಜ್ ಕಾಮಗಾರಿ ತಗ್ಗು ಪ್ರದೇಶದಲ್ಲಿ ಸುತ್ತ ಹೊಲ ರಸ್ತೆಯ ನೀರು ಸಂಗ್ರಹವಾಗುತ್ತಿದ್ದು ಈ ಕಾಮಗಾರಿ ಪ್ಲ್ಯಾನ ಅ ವೈಜ್ಞಾನಿಕ ಎಂದು ಜನರೇ ಆರೋಪಿಸುತ್ತಿದ್ದಾರೆ. ಇನ್ನು ಈ ಸ್ಥಳದಲ್ಲೇ ವಾಹನ ಸವಾರರಿಗೆ ಕಳ್ಳರು ಬೆದರಿಸಿ ಹಣ ದೋಚಿರುವ ತಾಜಾ ಉದಾಹರಣೆ ಕಣ್ಣೆದೆರು ಇರುವಾಗಲೇ ರಾತ್ರಿಯಾದ್ರೆ ಬೆಳಕು ಇರದ ಅಂಡರ್ ಬ್ರೀಡ್ಜ್ ಕಾಮಗಾರಿ ಕಳ್ಳತನ ಮತ್ತು ರಸ್ತೆ ಸಂಚಾರದ ಅಪಘಾತಕ್ಕೆ ಮತ್ತಷ್ಟು ಸಹಕಾರಿಯಾಗುತ್ತೆ ಎಂದು ಜನ ಆರೋಪಿಸುತ್ತಿದ್ದು ಶೀಘ್ರವೇ ಹೊಸ ಉಪಾಯ ಕಂಡುಕೊಳ್ಳಿ ಎನ್ನುತ್ತಿದ್ದಾರೆ.

Edited By :
Kshetra Samachara

Kshetra Samachara

06/10/2020 06:22 pm

Cinque Terre

37.92 K

Cinque Terre

0

ಸಂಬಂಧಿತ ಸುದ್ದಿ