ಧಾರವಾಡ: ತಾಂತ್ರಿಕ ದೋಷದಿಂದಾಗಿ ಧಾರವಾಡ ಜಿಲ್ಲೆಯಲ್ಲಿ ತುರ್ತಾಗಿ ಬಳಸಲ್ಪಡುವ 108 ಟೋಲ್ ಫ್ರೀ ನಂಬರ್ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನಿನ್ನೆಯಿಂದ ಈ ಟೋಲ್ ಫ್ರೀ ನಂಬರ್ ಸ್ಥಗಿತಗೊಂಡಿದ್ದು, ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದೆ.
ತಾಂತ್ರಿಕ ದೋಷದಿಂದ ಆದ ಸಮಸ್ಯೆಯಿಂದಾಗಿ, ಜಿಲ್ಲಾ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು 9591675786, 7411669489, 8660192711 ಹಾಗೂ 112 ಟೋಲ್ ಫ್ರೀ ನಂಬರ್‌ಗಳ ವ್ಯವಸ್ಥೆ ಮಾಡಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ಇಂದು 108 ಟೋಲ್ ಫ್ರೀ ನಂಬರ್ ಮತ್ತೆ ಕಾರ್ಯ ನಿರ್ವಹಿಸಲಿದ್ದು, ಅದು ಸಂಪರ್ಕವಾಗದೇ ಇದ್ದ ಪಕ್ಷದಲ್ಲಿ ಮೇಲಿನ ಮೊಬೈಲ್ ನಂಬರ್‌ಗಳಿಗೆ ಸಂಪರ್ಕ ಮಾಡಬಹುದು ಎಂದು ಡಿಎಚ್‌ಓ ಡಾ.ಬಿ.ಸಿ.ಕರಿಗೌಡರ ತಿಳಿಸಿದ್ದಾರೆ.
Kshetra Samachara
26/09/2022 09:30 am