ಕುಂದಗೋಳ : ಅದೊಂದು ತಾಲೂಕು ಆಸ್ಪತ್ರೆ, ಆ ಆಸ್ಪತ್ರೆ ಗರ್ಭಿಣಿ ಬಾಣಂತಿಯರ ಆರೈಕೆ ಅತ್ಯುತ್ತಮ ಹೆರಿಗೆಗೆ ಹೆಸರುವಾಸಿ, ಆ ಆಸ್ಪತ್ರೆಯಲ್ಲಿ ವರ್ಷಕ್ಕೆ 600 ಹೆರಿಗೆ ಅಂದ್ರೇ ತಿಂಗಳಿಗೆ 50ಕ್ಕೂ ಅಧಿಕ ಹೆರಿಗೆ ನಡೆಯುತ್ತಿವೆ ಆದ್ರೇ, ಒಂದೇ ಒಂದು ಸೌಲಭ್ಯದ ಕೊರತೆ ಗರ್ಭಿಣಿಯರಿಗೆ ದೊಡ್ಡ ಸಮಸ್ಯೆಯಾಗಿದೆ.
ನಿತ್ಯ ಕುಂದಗೋಳ ತಾಲೂಕ ಆಸ್ಪತ್ರೆ ಅರಸಿ ಬರುವ ಗರ್ಭಿಣಿಯರಿಗೆ ವೈದ್ಯರಿಂದ ಉತ್ತಮ ಚಿಕಿತ್ಸೆ ಔಷಧಿ ಆರೋಗ್ಯ ಸಲಹೆ ಸಿಗುತ್ತೆ. ಆದ್ರೇ ಮಗುವಿನ ಬೆಳವಣಿಗೆ, ನ್ಯೂನ್ಯತೆ ಪತ್ತೆ ಹಚ್ಚಲು ರೆಡಿಯಾಲಜಿ ಸ್ಕ್ಯಾನಿಂಗ್ ಸೇವೆ ಇಲ್ಲದಾಗಿದೆ.
ಈಗಾಗಲೇ ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಲಕ್ಷ ಲಕ್ಷ ಬೆಲೆಬಾಳುವ ರೆಡಿಯಾಲಜಿ ಸ್ಕ್ಯಾನಿಂಗ್ ಯಂತ್ರ ಇದ್ದರೂ ಅದನ್ನು ಮುನ್ನೆಡೆಸಲು ನುರಿತ ವೈದ್ಯರೇ ಇಲ್ಲಾ, ಈ ಕಾರಣ ಗರ್ಭಿಣಿಯರು ಸಾವಿರ ಎರಡು ಸಾವಿರ ಕೊಟ್ಟು ಖಾಸಗಿ ಕ್ಲಿನಿಕ್ ಹೋಗಿ ರೆಡಿಯಾಲಜಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಪುನಃ ಸರ್ಕಾರಿ ಆಸ್ಪತ್ರೆಗೆ ಬರಬೇಕು ಹೀಗಾಗಿ ಕೆಲ ಗರ್ಭಿಣಿಯರು ಖಾಸಗಿ ಆಸ್ಪತ್ರೆ ಎಡೆಗೆ ವಾಲುವುದು ಸಹ ಹೆಚ್ಚಾಗುತ್ತಿದೆ.
ಈಗಾಗಲೇ ರೆಡಿಯಾಲಜಿ ಸ್ಕ್ಯಾನಿಂಗ್ ವೈದ್ಯರ ಭರ್ತಿಗಾಗಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲಾ.
ಸದ್ಯ ತುರ್ತು ಚಿಕಿತ್ಸೆ ವೇಳೆ ಸ್ತ್ರೀ ರೋಗ ತಜ್ಞ ವೈದ್ಯರೇ ಮಾತ್ರ ರೆಡಿಯಾಲಜಿ ಸ್ಕ್ಯಾನಿಂಗ್ ನಿಭಾಯಿಸುತ್ತಿದ್ದಾರೆ. ಆದ್ರೇ ಗರ್ಭಿಣಿ ಮಹಿಳೆಯರ ಮಗು ಬೆಳವಣಿಗೆ ನ್ಯೂನ್ಯತೆ ಸೇರಿದಂತೆ ಇತರೆ ಅವಶ್ಯಕ ತಂತ್ರಜ್ಞಾನಕ್ಕೆ ರೆಡಿಯಾಲಜಿ ಯಂತ್ರ ಗರ್ಭಿಣಿಯರಿಗೆ ಸಾಮಾನ್ಯವಾಗಿ ಲಭ್ಯ ಆಗ್ತಾ ಇಲ್ಲಾ ಈ ಕಾರಣ ಹಳ್ಳಿ ಬಡ ಕುಟುಂಬದ ಗರ್ಭಿಣಿಯರು ಕೇವಲ ಸ್ಕ್ಯಾನಿಂಗ್‌ಗಾಗಿ ನಗರಕ್ಕೆ ಪ್ರಯಾಣ ಬೆಳೆಸುವ ದುಸ್ಥಿತಿ ಉಂಟಾಗಿದೆ.
ಒಟ್ಟಾರೆ ಈ ಬಗ್ಗೆ ಸ್ಥಳೀಯ ಶಾಸಕಿ ಕುಸುಮಾವತಿ ಶಿವಳ್ಳಿ ಗಮನಿಸಿ 100 ಬೆಡ್ ಸೌಲಭ್ಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆಗೆ ರೆಡಿಯಾಲಜಿ ವೈದ್ಯರನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
01/08/2022 07:31 pm