ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕುಡಿಯಲು ಶುದ್ಧ ನೀರಿಲ್ಲದೆ ರೋಗಿಗಳ ಪರದಾಟ

ನವಲಗುಂದ: ದಿನಕ್ಕೆ ನೂರಾರು ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರ್ತಾರೆ. ಅಷ್ಟೇ ಅಲ್ಲದೇ ಇಲ್ಲೇ ದಾಖಲಾದ ರೋಗಿಗಳು ಸಹ ಇರ್ತಾರೆ. ಇಂತಹ ಆಸ್ಪತ್ರೆಯಲ್ಲಿಯೇ ಕುಡಿಯುವ ನೀರಿನ ಕೊರತೆ ಇದ್ರೆ ಏನು ಮಾಡ್ಬೇಕು? ಇಂತಹ ಸಮಸ್ಯೆಯ ಸುಳಿಯಲ್ಲಿ ಈಗ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿನ ರೋಗಿಗಳು ಸಿಲುಕಿದ್ದಾರೆ.

ಹೌದು… ನವಲಗುಂದ ತಾಲೂಕು ಕುಡಿಯುವ ನೀರಿನ ಸೌಕರ್ಯ ಇಲ್ಲದೇ ರೋಗಿಗಳ ಪಾಡು ಹೇಳತೀರದು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ವ್ಯಕ್ತಿಯೊಬ್ಬ ತನ್ನ ಅಳಲನ್ನು ತೋಡಿಕೊಂಡದ್ದು ಹೀಗೆ...

ಇನ್ನು ಈ ಬಗ್ಗೆ ವೈದ್ಯಾಧಿಕಾರಿಗಳಾದ ಡಾ.ರೂಪಾ ಕಿಣಗಿ ಅವರ ಗಮನಕ್ಕೆ ತಂದಾಗ ಅವರು ಹೇಳಿದ್ದು ಹೀಗೆ...

ಇನ್ನು ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ನೀರಿನ ಸೌಲಭ್ಯ ಇದೆಯಂತೆ, ಅದು ಎಷ್ಟೋ ಜನರಿಗೆ ಗೊತ್ತಿಲ್ಲ. ಕೆಳಗಡೆ ಇರುವ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗಿದೆ. ಇನ್ನೆರಡು ದಿನಗಳಲ್ಲಿ ನೀರಿನ ಪೂರೈಕೆ ಮಾಡಲಾಗುವುದು ಎಂದು ಕಿಣಗಿ ಅವರು ತಿಳಿಸಿದ್ದಾರೆ. ಇನ್ನಾದ್ರೂ ಸಾರ್ವಜನಿಕರಿಗೆ ನೀರಿನ ಸೌಲಭ್ಯ ಸಿಗುತ್ತಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

31/05/2022 08:08 pm

Cinque Terre

21.74 K

Cinque Terre

0

ಸಂಬಂಧಿತ ಸುದ್ದಿ