ಕುಂದಗೋಳ : ಇಲ್ಲಿನ ಪಶುಪತಿಹಾಳ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಆರ್.ಐ.ಡಿ.ಎಫ್ ಯೋಜನಾ ಅಧಿಕಾರಿಗಳು ಕೈಗೊಳ್ಳುವ ಕಾಮಗಾರಿಗಳು ಜನರಿಗೆ ಸರಿಯಾದ ಸಮಯಕ್ಕೆ ತಲುಪುತ್ತಲೇ ಇಲ್ಲ.
ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಕಟ್ಟಿದ ನೂತನ ಪಶು ಚಿಕಿತ್ಸಾಲಯ ಕಟ್ಟಡ ಅಚ್ಚುಕಟ್ಟಾಗಿ ತಯಾರಾದ್ರೂ ಇಂದಿಗೂ ಉದ್ಘಾಟನೆಯಾಗಿಲ್ಲ. ಈ ಪರಿಣಾಮ ಪಶುಪತಿಹಾಳ ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಜಾನುವಾರುಗಳಿಗೆ ರೋಗ ತಗುಲಿದರೆ ರೈತಾಪಿ ಜನ ಪರದಾಡಬೇಕಾಗುತ್ತೆ, .
ಈ ಹಿಂದೆ ಪಶು ಚಿಕಿತ್ಸಾಲಯ ನಿರ್ಮಾಣದ ಸಂದರ್ಭ ರೋಗದಿಂದ ಬಳಲಿದ ಹಸುವೊಂದಕ್ಕೆ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿತ್ತು. ಆ ವೇಳೆ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.
ಹೀಗಿದ್ರೂ ಪಶುಪತಿಹಾಳದಲ್ಲಿ ಪಶು ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಇತ್ತ ಪಶು ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ ಕಂಡು ಆರಂಭವಾಗದ ಕಾರಣ ಜಾನುವಾರುಗಳು ರೋಗಕ್ಕೆ ತುತ್ತಾದ್ರೇ ವೈದ್ಯರಿಗೆ ದೂರವಾಣಿ ಕರೆ ಮಾಡಿ ಎಲ್ಲಿದ್ದಾರೆ ಎಂದು ಹುಡುಕುವ ಸಮಸ್ಯೆ ಎದುರಾಗಿದೆ. ಒಟ್ಟಾರೆ ಹೈನುಗಾರಿಕೆ, ಕೃಷಿ ಕೆಲಸಕ್ಕೆ ಅಗತ್ಯವಾದ ಜಾನುವಾರುಗಳ ಆರೋಗ್ಯ ರಕ್ಷಣೆಗೆಂದೇ ತಯಾರಾದ ಪಶು ಚಿಕಿತ್ಸಾಲಯ ಆದಷ್ಟೂ ಶೀಘ್ರ ಉದ್ಘಾಟಿಸಿದ್ರೇ ಒಳಿತು ಎಂಬುದು ರೈತರ ಅಭಿಪ್ರಾಯ.
Kshetra Samachara
20/04/2022 03:26 pm